ಮ೦ಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ನ ಮುಂಭಾಗದ ಸೀಟ್ ನಲ್ಲಿ ಕುಳಿತಿದ್ದ ಮಹಿಳೆ ಹೊರಗೆ ಎಸೆಯಲ್ಪಟ್ಟು ತಲೆಯ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಜೋಕಟ್ಟೆ ಕ್ರಾಸ್ ನ ಸರ್ವೀಸ್ ಸ್ಟೇಷನ್ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.ಈರಮ್ಮ (65) ಮೃತಪಟ್ಟ ಮಹಿಳೆ .
ಈರಮ್ಮ ತನ್ನ ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಬೆಳಗ್ಗೆ 10 ಗಂಟೆ ಸಮಯಕ್ಕೆ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದರು. ಬಸ್ಸು ಜೋಕಟ್ಟೆ ಕ್ರಾಸ್ ನ ಸರ್ವೀಸ್ ಸ್ಟೇಷನ್ ಬಳಿ ತಲುಪಿದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ.ಪರಿಣಾಮ ಚಾಲಕನ ಹಿ೦ದುಗಡೆ ಇರುವ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್ನಿಂದ ಹೊರಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ಬಸ್ಸಿನ ಹಿಂದಿನ ಎಡ ಚಕ್ರ ಈರಮ್ಮನ ಮೇಲೆ ಚಲಿಸಿದ್ದು ತಲೆಗೆ ಗ೦ಭೀರ ಗಾಯಗೊ೦ಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮ೦ಗಳೂರು ಉತ್ತರ ಸಂಚಾರಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಿಗೊಳ್ಳಲಾಗಿದೆ.