21.1 C
Karnataka
Friday, November 15, 2024

ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ವಾರ್ಫ್ ಕೀಪರ್ ಸಾವು

ಮ೦ಗಳೂರು: ಪಣಂಬೂರು ನವಮ೦ಗಳೂರು ಬ೦ದರಿನ ಒಳಗಡೆ ಭರ್ತ್ ನಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸಿಗ್ನಲ್ ಕೊಡುವ ( ವಾರ್ಫ್ ಕೀಪರ್ ) ಕೆಲಸ ಮಾಡಿಕೊಂಡಿದ್ದ ಶಿವಮೂರ್ತಿ ಮೃತಪಟ್ಟ ಘಟನೆ ಸ೦ಭವಿಸಿದೆ.
ಸೋಮವಾರ ಸಂಜೆ 3:20 ಗಂಟೆಗೆ ಪಣಂಬೂರು ನವಮ೦ಗಳೂರು ಬ೦ದರಿನ ಒಳಗಡೆ ಭರ್ತ್ ನಂಬ್ರ 2ರಲ್ಲಿ ಟಿಪ್ಪರನ್ನು ಅದರ ಚಾಲಕ ರಾಜ ಎಂಬಾತನು ಭರ್ತ್ ಬಳಿಗೆ ಚಲಾಯಿಸಿಕೊಂಡು ಬಂದು ಮೈನ್ಸ್ ಅನ್ನು ಅನ್ ಲೋಡ್ ಮಾಡಲು ಟಿಪ್ಪರ್ ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಭರ್ತ್ ನಲ್ಲಿ ಸಿಗ್ನಲ್ ಕೊಡುವ ( ವಾರ್ಫ್ ಕೀಪರ್ ) ಕೆಲಸ ಮಾಡಿಕೊಂಡಿದ್ದ ಶಿವಮೂರ್ತಿ ಎಂಬವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಿವಮೂರ್ತಿ ಅವರು ಲಾರಿಯ ಅಡಿಗೆ ಬಿದ್ದು ಲಾರಿ ಬಲಬದಿಯ ಹಿಂಬದಿ ಚಕ್ರವು ಅವರ ದೇಹದ ಮೇಲೆ ಹರಿದು ದೇಹವು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮ೦ಗಳೂರು ಸ೦ಚಾರಿ ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles