ಮಂಗಳೂರು: ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಜ.20ರಂದು ಬೆಳಿಗ್ಗೆ 10.30 ಕ್ಕೆ ಬೈಕಂಪಾಡಿ ಕೆನರಾ ಕೈಗಾರಿಕೆಗಳ ಸಂಘದಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.
ಕೈಗಾರಿಕ ಇಲಾಖೆ, ಕಾಸಿಯಾ, ಸಣ್ಣ ಕೈಗಾರಿಕೆ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಸಿಡ್ಬಿ ಯಿಂದ ದೊರೆಯುವ ಹಣಕಾಸು ಯೋಜನೆಗಳು, ಝಡ್‍ಇಡಿ ಪ್ರಮಾಣಿಕರಣ, ಉದ್ಯಮ್ ನೋಂದಣಿ ಸಹಾಯ ವೇದಿಕೆ, ಡಿಜಿಟಲ್ ಉಪಕ್ರಮಗಳಾದ ಓಎನ್‍ಡಿಸಿ ಹಾಗೂ ಟ್ರೇಡ್ಸ್ ಫ್ಲಾಟ್ ಫಾರ್ಮ್ ಸ್ಥಳೀಯ ಬ್ಯಾಂಕುಗಳಿಂದ ದೊರೆಯುವ ಹಣಕಾಸು ಯೋಜನೆಗಳು ಸ್ವಯಂ ಉದ್ಯೋಗ ಸೇರಿದಂತೆ ಕಾರ್ಯಗಾರವನ್ನು ಆಯೋಜಿಸಲಾಗಿದೆ