26.3 C
Karnataka
Saturday, November 23, 2024

ಷೇರ್ ಟ್ರೇಡಿಂಗ್ ನಲ್ಲಿ ಹೂಡಿಕೆ ಅಮಿಷೆಯೊಡ್ಡಿ 18.92ಲಕ್ಷ ರೂ ವಂಚನೆ

ಬಂಟ್ವಾಳ:ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಾಭದ ಅಮಿಷೆಯೊಡ್ಡಿ 18.92ಲಕ್ಷ ರೂ ವಂಚನೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ನಿವಾಸಿ ಸುಬ್ರಾಯ ರಾಮ ಮಡಿವಾಳ (74) ಎಂಬವರ ಮೊಬೈಲ್ ಗೆ ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಕ್ಷಾ೦ತರ ರೂ.ಲಾಭ ಪಡೆಯುವಂತೆ ವಾಟ್ಸ್ ಪ್ ಮೂಲಕ ನವೆಂಬರ್ ತಿಂಗಳಿನಲ್ಲಿ ಅಪರಿಚಿತರಿ೦ದ ಮೇಸೆಜ್ ಬಂದಿತ್ತು.ಇದರ೦ತೆ ಅಪರಿಚಿತರು ನೀಡಿದ ಸೂಚನೆಗಳನ್ನು ಅನುಸರಿಸಿ, ಜನವರಿ 9ರಿಂದ‌ ಈವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 18,92,200 ರೂ ಹಣವನ್ನು ಪಾವತಿಸಿದ್ದರು. , ಆದರೆ ಆರೋಪಿಗಳು ಯಾವುದೇ ಲಾಭಾಂಶ ಮತ್ತು ಪಾವತಿಸಿದ ಹಣವನ್ನೂ ನೀಡದೇ ವಂಚಿಸಿರುತ್ತಾರೆ ಎಂಬುದಾಗಿ ದೂರುದಾರರು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles