ಮಂಗಳೂರು: ಮಂಗಳೂರು ನಗರದ ಬಲ್ಮಠ ನ್ಯೂ ರೋಡ್ ನಲ್ಲಿ ವಾಹನ ಪಾರ್ಕಿಂಗ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ
ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಕೇಂದ್ರ ಉಪ –ವಿಭಾಗ ಆ್ಯಂಟಿ ಡ್ರಗ್ ತಂಡ ಕಾರ್ಯಾಚರಣೆ ನಡೆಸಿ ಬ೦ಧಿಸಿದೆ.
ಅತ್ತಾವರ ನಿವಾಸಿ ಆದಿತ್ಯ ಕೆ.(29) ಹಾಗೂ ಅಡ್ಯಾರ್ ಪದವು ಲೋಬೊ ನಗರ ನಿವಾಸಿ ರೋಹನ್ ಸಿಕ್ವೇರ (33) ಬ೦ಧಿತ ಆರೋಪಿಗಳು.
ಆರೋಪಿಗಳಿ೦ದ ಸುಮಾರು ರೂ .50,000/- ಮೌಲ್ಯದ 27 ಗ್ರಾಂ ಹೈಡ್ರೋವೀಡ್ ಗಾಂಜ, ಸುಮಾರು ರೂ.
1,00,000 ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜ, ರೂ. 8000 ಮೌಲ್ಯದ ಗಾಂಜ ಆಷ್ ಆಯಿಲ್ , ರೂ.16,800
ಮೌಲ್ಯದ 2 ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು ಕೃತ್ಯಕ್ಕೆ ಬಳಸಿದ ರೂ .90,000/- ಮೌಲ್ಯದ ಎರಡು
ಮೊಬೈಲ್ ಪೋನ್ ಮತ್ತು ರೂ .20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವೆರ್ನ ಮಾಡೆಲ್ ನ ಕಾರು ಮತ್ತು
ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ
ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಪೊಲೀಸ್ ಆಯುಕ್ತ ಅನುಪಮ್ಅಗ್ರವಾಲ್,ಅವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ್ ಗೋಯಲ್ ಹಾಗೂ ದಿನೇಶ್ ಕುಮಾರ್ ಅವರಮಾರ್ಗದರ್ಶನದಲ್ಲಿ, ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತೋರಟ್ ಅವರನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಅಜ್ಮತ್ ಆಲಿ ಮತ್ತು ಮಂಗಳೂರು ಕೇಂದ್ರ ಉಪ –ವಿಭಾಗ ಆ್ಯಂಟಿ ಡ್ರಗ್ ತಂಡದ ವಿಭಾಗಾಧಿಕಾರಿಅಧಿಕಾರಿ ಪಿಎಸ್ ಐ ಪ್ರದೀಪ್ ಟಿ ಆರ್ ಮತ್ತು ಸಿಬ್ಬಂದಿಗಳು ನಡೆಸಿದ್ದಾರೆ.