ಬಂಟ್ವಾಳ :ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊ೦ದರಲ್ಲಿ ಆರೋಪಿಗಳಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ 18 ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು
ಬ೦ಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಪೀಯುಶ್ ಕುಮಾರ್ , ವಿನಯ್ ಕುಮಾರ್ , ಬ್ರಿಜಿ ನಾರಾಯಣ , ರವೀಂದ್ರ, ಕೃಪ ಶಂಕರ್ , ವಿವೇಕ್ ರಾಮ್ ,ಬದ್ಧ ರಾಮ್ , ನಂದಿನಿ ರಾಮ್ , ಕಿಶೋರ್ ಕುಮಾರ್ ,ಶಾಮ್ ಬಿಹಾರಿ ರಾಮ್ ,ಪ್ರೇಮಾಚಂದ ರಾಮ್ , ಸತೇಂದ್ರ , ಭಗವಾನ್ ರಾಮ್ ,] ಉಮೇಶ್ ರಾಮ್ , ರಾಸ್ ಬಿಹಾರಿ ರಾಮ್ , ಭಗೀರಥಿ ಚೌಧರಿ ,ಸುನೀಲ್ ರಾಮ್ , ನಂದಿಹಳ ರಾಮ್ ಬ೦ಧಿತ ಆರೋಪಿಗಳು.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ. ಹಾಗೂ ಪೊಲೀಸ್ ಉಪನಿರೀಕ್ಷಕ ಹರೀಶ್ ಎಂ.ಆರ್. ಅವರ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕ ಮೂರ್ತಿ , ಹೆಚ್ ಸಿ ಗಣೇಶ್ ಪ್ರಸಾದ್ ಪಿ.ಸಿ ಯೋಗೇಶ್ . ಡಿ.ಎಲ್ ವಿಜಯ್ ಕುಮಾರ್ , ಸುರೇಶ್ ಉಪ್ಪಾರ ಅವರ ತಂಡ ಉತ್ತರ ಪ್ರದೇಶದಲ್ಲಿ ಆರೋಪಿಗಳಗಳನ್ನು ಬ೦ಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯ ಗೊಳಿಸಿರುತ್ತದೆ.