ಮಂಗಳೂರು:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಫೆ.9 ಮತ್ತು 10ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಫೆಬ್ರವರಿ 9 ಶುಕ್ರವಾರ ಬೆಳಿಗ್ಗೆ 8.15ಕ್ಕೆ- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 8.45ಕ್ಕೆ- ಸಕಿ೯ಟ್ ಹೌಸ್, 10 ಗಂಟೆಗೆ – ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳೊಂದಿಗೆ ಸಭೆ. ರಾತ್ರಿ 8 ಗಂಟೆಗೆ ಉಡುಪಿಗೆ ತೆರಳುವರು.ಫೆಬ್ರವರಿ 10 ಶನಿವಾರ ಸಂಜೆ ನಗರದ ತಣ್ಣೀರುಬಾವಿಗೆ ಆಗಮಿಸುವ ಸಚಿವರು, ಸಂಜೆ 5.30ಕ್ಕೆ ಗಾಳಿಪಟ ಹಬ್ಬದಲ್ಲಿ ಭಾಗವಹಿಸಿ, ರಾತ್ರಿ 8.10ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು.