ಮಂಗಳೂರು: ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ಬ೦ಧಿಸಿ ಸೊತ್ತು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ತಲಪಾಡಿ ಬಳಿಯ ಕಜೆ ನಿವಾಸಿ ರಿಯಾಜ್ (30 ) ಬ೦ಧಿತ ಆರೋಪಿ.
ಜ , 29 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳ ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕೊಣಾಜೆ ಪೊಲೀಸರು ಪತ್ತೆ ಕಾಯಾ೯ಚರಣೆ ಕೈಗೊ೦ಡಿದ್ದರು. ಫೆ.14ರಂದು ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ ಅವರು ಸಿಬ್ಬಂದಿಗಳಾದ ಸಂತೋಷ್,ಬಸವನಗೌಡ, ಸುರೇಶ್ ಜೊತೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರಿಯಾಜ್ ತಲಪಾಡಿನನ್ನು ನಾಟೇಕಲ್ ಬಳಿ ಬ೦ಧಿಸಿದರು.ಆತ ಕೃತ್ಯಕ್ಕೆ ಉಪಯೋಗಿದ ಸ್ಕೂಟಿಯನ್ನು ಸ್ವಾಧೀನಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ