20.1 C
Karnataka
Tuesday, November 26, 2024

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 33ನೇ ಕದ್ರಿ ದಕ್ಷಿಣ ವಾರ್ಡಿನಲ್ಲಿ 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಇಲ್ಲಿನ ಕರಾವಳಿ ಲೇನ್ ತೋಮಸ್ ಸಾಲ್ದಾನ ಮನೆ ಬಳಿಯಿಂದ ಸಿರಿಲ್ ಕ್ರಾಸ್ತಾ ಮನೆಯವರೆಗೆ ಹಾಗೂ ಓಸ್ವಾಲ್ಡ್ ಫರ್ನಾಂಡಿಸ್ ಮನೆಯಿಂದ ಪ್ರೀತಿ ರೆಗೋ ಮನೆತನಕ ರಸ್ತೆ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಉಪಯೋಗವಾಗಲಿ ಎಂದರು.

ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯರಾದ ಮನೋಹರ್ ಕದ್ರಿ, ಶಕೀಲ ಕಾವಾ, ಭರತ್ ಕುಮಾರ್ ಸೂಟರ್ ಪೇಟೆ, ಗಣೇಶ್ ಕುಲಾಲ್, ಪ್ರಮುಖರಾದ ವಸಂತ ಜೆ ಪೂಜಾರಿ, ಭಾಸ್ಕರ್ ಚಂದ್ರ ಶೆಟ್ಟಿ, ಯಶವಂತ್ ನಾಯಕ್ ತಾರನಾಥ ಶೆಟ್ಟಿ, ಶೈಲೇಶ್, ಮನೋಜ್, ಮಹೇಶ್ ಪಾಂಡ್ಯ, ಸಂಜೀವ ಅಡ್ಯಾರ್, ಸಚಿನ್, ಚಂದ್ರಕಾಂತ್,ಕಮಲಾಕ್ಷ ಪೈ, ರಾಘವೇಂದ್ರ ಬರುವತ್ತಾಯ, ಗಾಡ್ವಿನ್, ಚರಣ್, ನರೇಶ್ ರಾವ್, ನಾಗೇಶ್, ಕುಸುಮಾಕರ್, ಸಹಾನ್, ಅನಿಲ್ ಶೆಟ್ಟಿ, ಶ್ರವಣ್, ರಮಾನಂದ ಸೇಮಿತ, ಅರ್ಚನಾ ನಾಯಕ್, ಸುಜಯ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles