ಮಂಗಳೂರು: ಮಹಾನಗರಪಾಲಿಕೆಯ ಶೇ 24.10, ಶೇ7.25 ಮತ್ತು ಶೇ.5 ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 33 ಫಲಾನುಭವಿಗಳಿಗೆ ಮೇಯರ್ ಸುಧೀರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ 13,51,425 ರೂ ಮೊತ್ತದ ಚೆಕ್ಕನ್ನು ವಿತರಿಸಲಾಯಿತು. ಮೇಯರ್ ಅವರ ಕೊಠಡಿಯಲ್ಲಿ ಆಯೋಜಿಸಲಾದ ಕಾಯ೯ಕ್ರಮದಲ್ಲಿ ಶೇ 24.10 ಯೋಜನೆಯಡಿ ಬರುವ ಪರಿಷಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ದುರಸ್ತಿ, ಮನೆ ನಿಮಾ೯ಣ, ತಾಳಿಭಾಗ್ಯ ಮುಂತಾದ ಸವಲತ್ತು ಪಡೆಯಲು ಸಹಾಯಧನ, ಶೇ 7.25 ರ ನಿಧಿಯಡಿ ಹಿಂದುಳಿದ ವಗ೯ದ ಸುಮಾರು 6 ಮಂದಿಗೆ ಶಸ್ತ್ರಾ ಚಿಕಿತ್ಸ ವೆಚ್ಚ, ಮನೆ ದುರಸ್ತಿ, ಮತ್ತು ಪಕ್ಕಾ ಮನೆ ನಿಮಾ೯ಣ, ನಳ್ಳಿ ನೀರಿನ ಜೋಡಣೆ ಮೊತ್ತ, ಹಾಗೆಯೆ ಶೇ 5 ರ ನಿಧಿಯಡಿ ಅಂಗವಿಕಲರಿಗೆ ವೀಲ್ ಚೇರ್, ಕ್ರೀಡಾ ಪ್ರೋತ್ಸಾಹ ಧನ ಮುಂತಾದ ಸವಲತ್ತುಗಳನ್ನು ನೀಡಲಾಯಿತು. ಕಾಯ೯ಕ್ರಮದಲ್ಲಿ ಮಾಜಿ ಮೇಯರ್ ಜಯಾನಂದ ಅಂಚನ್, ಸ್ಥಾಯಿ ಸಮಿತಿಯ ಅಧ್ಯಕ್ಷ ಭರತ್ ಕುಮಾರ್, ಗಣೇಶ್ ಕುಲಾಲ್, ಮತ್ತು ಸದಸ್ಯರಾದ ಜಯಲಕ್ಷ್ಮೀ ಶೆಟ್ಟಿ, ಸಂದೀಪ್ ಮತ್ತು ಕೇಶವ ಉಪಸ್ಥಿತರಿದ್ದರು.