17.9 C
Karnataka
Saturday, November 23, 2024

3.5 ಲಕ್ಷ ಕಿಂತಲೂ ಅಧಿಕ ಮತಗಳ ಅಂತರದಿಂದ ಗೆಲುವು: ನಳಿನ್ ಕುಮಾರ್ ಕಟೀಲ್

ಮ೦ಗಳೂರು: ಏದಕ್ಷಿಣ ಕನ್ನಡ ಲೋಕಸಭೆ ಚುನಾವಣೆ ಪೂರ್ವ ಭಾವಿ ಸಭೆಯು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲೆಯ ಚುನಾವಣಾ ಕಾರ್ಯಾಲಯ ದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ಅವರು ಮಾತನಾಡಿ ಮೋದಿ ಸರಕಾರ ದ ಅವಧಿಯಲ್ಲಿ ತಾನು ಜಿಲ್ಲೆಗೆ ತಂದ ಒಂದು ಲಕ್ಷ ಕೋಟಿ ಅನುದಾನದ ಮಾಹಿತಿ ಯನ್ನು ಮನೆ ಮನೆಗೆ ತಿಳಿಸುವಂತೆ ಕರೆ ನೀಡಿದರು. ನಿರಂತರ 15 ವರ್ಷಗಳ ಧೀರ್ಘ ಅವಧಿ ಗೆ ಸಂಸದನಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು ಮುಂದಿನ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಎಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕೆಂದು ಚುನಾವಣಾ ಕಾರ್ಯನಿರ್ವ ಹಣ ತಂಡಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ವಿಭಾಗ ಸಹ ಪ್ರಭಾರಿ ಗೋಪಾಲ ಕೃಷ್ಣ ಹೇರಳೆ,ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್,ನಿರ್ವಹಣಾ ಸಮಿತಿ ಸಂಚಾಲಕ ನಿತಿನ್ ಕುಮಾರ್,ಮಾಜಿ ಶಾಸಕರು,ಶಾಸಕರು,ಜಿಲ್ಲಾ ಪದಾಧಿಕಾರಿಗಳು,ಮಂಡಲ ,ಮೋರ್ಚಾ ಪದಾಧಿಕಾರಿಗಳು,ಮಾದ್ಯಮ ಪ್ರಮುಖರು ಉಪಸ್ಥಿತ ರಿದ್ದರು..

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles