26.5 C
Karnataka
Saturday, November 23, 2024

ವಿವಾಹವಾಗಲು ನಿರಾಕರಿಸಿದ್ದಕ್ಕೆ ಕೊಲೆ ಬೆದರಿಕೆ

ಮ೦ಗಳೂರು:ವಿವಾಹವಾಗಲು ನಿರಾಕರಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿ ಮಹಿಳೆಯ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಗ್ಗೆ ಬಗ್ಗೆ ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆಯ ದೂರಿನಂತೆ ಆಕೆಗೆ 7 ವರ್ಷದ ಹಿಂದೆ ಮದುವೆಯಾಗಿ ವಿಚ್ಛೇದನವಾಗಿರುತ್ತದೆ. ಆಕೆ ತನ್ನ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದು, 2022 ನೇ ವರ್ಷದಲ್ಲಿ ಮೇಟ್ರಿಮೋನಿಯೊಂದರ ಮೂಲಕ ಆರೋಪಿ ಪ್ರಶಾಂತ್‌ ಕೋಟ್ಯಾನ್‌ ಉಡುಪಿ ಎಂಬಾತನ ಪರಿಚಯವಾಗಿ ಮದುವೆಯಾಗಲು ತೀರ್ಮಾನಿಸಿರುತ್ತಾರೆ. ಆತನ ಪೂರ್ವಾಪರವನ್ನು ಮನೆಯವರು ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡುಬಾರದ ಹಿನ್ನೆಲೆಯಲ್ಲಿ, ಆಕೆ ಮತ್ತು ಮನೆಯವರು ಮದುವೆಗೆ ನಿರಾಕರಿಸಿರುತ್ತಾರೆ. ಇದರಿಂದ ಅಸಮಧಾನಗೊಂಡ ಆರೋಪಿಯು ಮಹಿಳೆಗೆ ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೋ ಗಳನ್ನು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿರುತ್ತಾನೆ. ಮುಂದುವರಿದಂತೆ ಆರೋಪಿಯು ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ. ಈ ಬಗ್ಗೆ ಸಂತ್ರಸ್ತ ಮಹಿಳೆಯ ನೀಡಿರುವ ದೂರಿನಂತೆ ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles