21 C
Karnataka
Saturday, November 23, 2024

ಪೋಲ್ಯಾಂಡ್‌ ನಲ್ಲಿ ಕೆಲಸಕ್ಕೆ ವೀಸಾ ಕೊಡಿಸುವುದಾಗಿ ವಂಚನೆ: ದೂರು

ಬೆಳ್ತ೦ಗಡಿ: ಪೋಲ್ಯಾಂಡ್‌ ನಲ್ಲಿ ಕೆಲಸಕ್ಕೆ ವೀಸಾ ಕೊಡಿಸುವುದಾಗಿ ನಂಬಿಸಿ ಲಕ್ಷಾ೦ತರ ರೂ. ವಂಚನೆ ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ನಿವಾಸಿ ರೆಜಿ ಕೆ.ಎ, (47) ಎಂಬವರ ದೂರಿನಂತೆ, ಅವರ ಮಗ ಅಲ್ಬಿನ್ ಕೆ.ಆರ್ ರವರಿಗೆ ಪೋಲ್ಯಾಂಡ್‌ ದೇಶದಲ್ಲಿ ಕೆಲಸಕ್ಕೆ ಹೋಗಲು ಆರೋಪಿ ಮನೋಜ್‌ ಎಂಬಾತನು ವೀಸಾ ಕೊಡಿಸುವುದಾಗಿ ನಂಬಿಸಿ, ವಿವಿಧ ಕಾರಣಗಳನ್ನು ನೀಡಿ ಹಂತಹಂತವಾಗಿ ಒಟ್ಟು 2,50,000 ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು, ಈವರೆಗೆ ವೀಸಾವನ್ನು ಕೊಡಿಸದೇ ಹಾಗೂ ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿದ್ದಾನೆ.ರೆಜಿ ಕೆ.ಎ ಅವರ
ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles