ಮಂಗಳೂರು:ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜ್, ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ ಕಾಲೇಜ್ ಹಿಂದಿ ಸಂಗೋಷ್ಠಿ ಆಯೋಜಿಸಲಾಗಿತ್ತು.
ಮಂಗಳೂರಿನ ಸ್ಥಳೀಯ ಕಾಲೇಜ್, ಉಡುಪಿ ಮತ್ತು ಸೂಳ್ಯ ಕಾಲೇಜ್ ನಿಂದ ವಿದ್ಯಾರ್ಥಿ / ವಿದ್ಯಾರ್ಥಿನಿಯರು, ವಿದ್ಯಾರ್ಥಿ ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು. ಬೆಸೆಂಟ್ ಮಹಿಳಾ ಕಾಲೇಜ್ ಪ್ರಾಂಶುಪಾಲ ಡಾ. ಪ್ರವೀಣ ಕುಮಾರ್ ಕೆ ಸಿ. ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಅಶ್ವಿನಿ ಕುಮಾರ್, ಉಪ ಮಹಾಪ್ರಬಂಧಕ – ನೆಟ್ ವರ್ಕ್, ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ ಉಪಸ್ಥಿತರಿದ್ದರು ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ನ ಆಡಳಿತ ಅಧಿಕಾರಿ ಪ್ರೊ.ರಾಜಶೇಖರ ಹೆಬ್ಬಾರ್, ಡಾ. ಮಂಜುಳ ಕೆ ಟಿ ಉಪಸ್ಥಿತರಿದ್ದರು. ಕಾಲೇಜ್ ನ ಹಿಂದೀ ವಿಭಾಗಧ್ಯಕ್ಷ ಡಾ. ಪರಶುರಾಮ್ ಮಾಲಗೆ ಮತ್ತು ಬ್ಯಾಂಕ್ ಆಫ್ ಬರೋಡಾದ ರಾಜಭಾಷಾ ಅಧಿಕಾರಿ ಪುಷ್ಪಲತಾ ಅವರು ಕಾರ್ಯಕ್ರಮಸಂಯೋಜಿಸಿದರು.