20.5 C
Karnataka
Friday, November 15, 2024

ವಿಕಸಿತ ಭಾರತದ ಗುರಿ ಸಾಧನೆಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು: ಪ್ರತಾಪ್ ಸಿಂಹ ನಾಯಕ್

ಮಂಗಳೂರು: ದೇಶದ ಅಭಿವೃದ್ಧಿ, ಭಾರತವನ್ನು ಜಗತ್ತಿನಲ್ಲೇ ನಂಬರ್ ಒನ್ ರಾಷ್ಟ್ರವಾಗಿ ಕಟ್ಟಿ ಬೆಳೆಸುವ ದೂರದೃಷ್ಟಿ ಹೊಂದಿರುವ ಮತ್ತು ಈಗಾಗಲೇ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತವನ್ನು 5ನೇ ಸ್ಥಾನಕ್ಕೇರಿಸಿದ ಸಮರ್ಥ ಹಾಗೂ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಮಾಡುವುದು ನಿಜವಾದ ದೇಶಪ್ರೇಮಿಗಳೆಲ್ಲರ ಹೊಣೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಅವರು ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಮತ್ತು ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಕಳದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿ ಸರಕಾರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮಾದರಿಯಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಮಾದರಿ ಆಡಳಿತ ನಡೆಸಿದ್ದಾರೆ. ಸ್ವತಂತ್ರ ಭಾರತ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ಅಂದರೆ 2047ರ ವೇಳೆಗೆ ಸುಭದ್ರ, ಸಶಕ್ತ ಹಾಗೂ ವಿಕಸಿತ ಭಾರತವನ್ನು ರೂಪಿಸುವುದು ಅವರ ಗುರಿಯಾಗಿದೆ. ಇಂತಹ ದೂರದೃಷ್ಟಿಯ ಜಾಗತಿಕ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಅನಿವಾರ್ಯ ಎಂದು ಪ್ರತಾಪ್ ಸಿಂಹ ನಾಯಕ್ ನುಡಿದರು.

ಆರೋಗ್ಯ ವಿಮೆ, ಕುಡಿಯುವ ನೀರು ಒದಗಿಸುವ ಹರ್‍‌ ಘರ್ ಜಲ್, ಸ್ವಚ್ಛ ಭಾರತ ಹಾಗೂ ಇಜ್ಜತ್ ಕಾ ಘರ್ ಯೋಜನೆಯಡಿ ದೇಶದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಾಣ, ಕೋವಿಡ್ ಕಾಲದಲ್ಲಿ ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ನರಳಿದರೆ, ಭಾರತದ ಅರ್ಥ ವ್ಯವಸ್ಥೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿ ಅಭಿವೃದ್ಧಿಯ ರಥ ಮುನ್ನಡೆಯುವಂತೆ ಮಾಡಿರುವುದು- ಇಂತಹ ನೂರಾರು ಕಾರಣಗಳಿಗೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಿಸುವುದು ನಮ್ಮ ಹೊಣೆಯಾಗಿದೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರುಕ್ಯಾಪ್ಟನ್ ಬೃಜೇಶ್ ಚೌಟರನ್ನು ಅತಿ ಹೆಚ್ಚು ಅಂತರದಿಂದ ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದು ಅವರು ನುಡಿದರು.

ಹಿರಿಯ ಸಂಪನ್ಮೂಲ ವ್ಯಕ್ತಿ ಶಿಕಾರಿಪುರ ಕೃಷ್ಣಮೂರ್ತಿ ಅವರು ಮಾತನಾಡಿ, ವಿವಿಧ ಪ್ರಕೋಷ್ಠಗಳಿಗೆ ಮಾರ್ಗದರ್ಶನ ಮಾಡಿದರು. ವ್ಯಾಪಾರಿಗಳ ಪ್ರಕೋಷ್ಠದ ಹಿರಿಯರಾದ ವಿಠಲದಾಸ್ ಪ್ರಭು, ಮೀನು ವ್ಯಾಪಾರಸ್ಥರಾದ ಸಂಧ್ಯಾ, ಅಸಂಘಟಿತ ಕಾರ್ಮಿಕರ ವಿಭಾಗದ ಸಚಿನ್ ಡಿ. ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಚಿನ್ ಗೌಡ, ಜಿಲ್ಲಾ ಸಂಚಾಲಕರಾದ ಪ್ರಸನ್ನ ದರ್ಭೆ, ಪ್ರಮುಖರಾದ ಜಯಂತ ಸಾಲಿಯಾನ್, ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles