ಮಂಗಳೂರು: ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ರೂಪ ಚೇತನ್ ಅವರ ಅಧಿಕಾರ ಸ್ವೀಕಾರ ಹಾಗೂ ಪದಾಧಿಕಾರಿಗಳ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಬಳಿಕ ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಮಣಿ ಉಮೇಶ್, ಮೀನಾ ಟೆಲ್ಲಿಸ್,ಮಮತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಜೇಮ್ಸ್ ಸಾಂಕ್ಟಿಸ್, ಮರಿಯ ಲೋಬೊ, ರಶ್ಮಿ ಶೆಟ್ಟಿ, ಮೋಹಿನಿ ಅಮೀನ್, ಮಲ್ಲಿಕಾ ಜಯರಾಜ್, ಪ್ರಭಾವತಿ, ಚಿತ್ರಾಕ್ಷಿ, ಲಿಡ್ಯಾ ಡೇನ್ಸಿ,ಕಾನೂನು ಸಲಹೆಗಾರರಾದ ಹಸೀನ, ಲೀಲಾವತಿ, ವಾರ್ಡ್ ಮಹಿಳಾ ಅಧ್ಯಕ್ಷರಾಗಿ ಉಷಾ ಶ್ರೀಕಾಂತ್, ಶಶಿಕಲಾ, ವಸಂತಿ, ಶೋಭಾ ಕೋಟ್ಯಾನ್ ಅವರಿಗೆ ಆದೇಶ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮಾಜಿಮೇಯರಾದ ಶಶಿಧರ್ ಹೆಗ್ಡೆ, ಕೆ.ಅಶ್ರಫ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ಸಾಲ್ಯಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಓಬಿಸಿ ಜಿಲ್ಲಾಧ್ಯಕ್ಷ ವಿಶ್ವಾಸ್ಕುಮಾರ್ ದಾಸ್, ಮುಖಂಡರಾದ ನವೀನ್ ಡಿಸೋಜ, ಟಿ.ಕೆ.ಸುಧೀರ್, ಚೇತನ್ ಕುಮಾರ್, ವಹಾಬ್ ಕುದ್ರೋಳಿ, ಸಬಿತಾ ಮಿಸ್ಕಿತ್, ಸತೀಶ್ ಪೆಂಗಲ್, ಲಿಯಾಕತ್ ಷಾ, ತನ್ವೀರ್ ಷಾ,ಗಿರೀಶ್ ಶೆಟ್ಟಿ, ನೆಲ್ಸನ್ ಮೊಂತೇರೊ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಪ್ರತಿಭಾಬಿ.ಸಾಲ್ಯಾನ್, ಚಂದ್ರಕಲಾ ಡಿರಾವ್, ಸಾರಿಕ ಪೂಜಾರಿ ಉಪಸ್ಥಿತರಿದ್ದರು.