ಮಂಗಳೂರು: ಮಂಗಳೂರಿನ ಇಂದಿರಾ ಎಜುಕೇಶನ್ ಟ್ರಸ್ಟ್ ಕಾಲೇಜಿನಲ್ಲಿ ಪದವಿ ದಿನವನ್ನು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್ನಲ್ಲಿಏಪ್ರಿಲ್ 30 ರಂದು ಆಚರಿಸಲಾಯಿತು.
ಜಿಲ್ಲಾ ವೈದ್ಯಾಧಿಕಾರಿ ಡಾ.ಜೆಸಿಂತಾ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು. ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಉಷಾ ಮುಕ್ಕುಂದ್ ಭಂಡಾರಿ, ಮತ್ತು RGUHS ಅಕಾಡೆಮಿಕ್ ಕೌನ್ಸಿಲ್ ಸದಸ್ಯೆ ಡಾ. ವೈಶಾಲಿ ಅತಿಥಿಗಳಾಗಿದ್ದರು. ಇಂದಿರಾ ಎಜುಕೇಶನಲ್ ಟ್ರಸ್ಟ್ನ ಪಿಆರ್ಒ ಸಾಜಿ ಪಿ ಆರ್., ಇಂದಿರಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸೈಯದ್ ನಿಜಾಮುದ್ದೀನ್ ,ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗ್ರೀಶಾ ಜೋಸ್, ಇಂದಿರಾ ಕಾಲೇಜ್ ಆಫ್ ಅಲೈಡ್ ಮತ್ತು ಹೆಲ್ತ್ ಸೈನ್ಸಸ್ನ ಉಪ ಪ್ರಾಂಶುಪಾಲರಾದ ರೆಮ್ಯಾ ಎಸ್. ನಾಯರ್ ಮತ್ತು ಪ್ರಭಾರಿ ಪ್ರಾಂಶುಪಾಲ ಡಾ. ಎನ್. ಜಿಯೋವಿಯಾ ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲಜಾರ್ಜ್(ಪಿಟಿ) ಉಪಸ್ಥಿತರಿದ್ದರು.
ಎಂಎಸ್ಸಿ ನರ್ಸಿಂಗ್, ಬಿ.ಎಸ್ಸಿ. ನರ್ಸಿಂಗ್. ಪೋಸ್ಟ್ ಬೇಸಿಕ್ B.Sc ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್, GNM ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ವಿದ್ಯಾರ್ಥಿಗಳು ಡಿಪ್ಲೋಮಾ ಮತ್ತು ಪ್ರಮಾಣಪತ್ರಗಳನ್ನು ಪಡೆದರು. ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಡಾ ಸೈಯದ್ ನಿಜಾಮುದ್ದೀನ್ ಅವರಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. . ಇಂದಿರಾ ನರ್ಸಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕ ಪವಿತ್ರ ಪೂಜಾರಿ ಸ್ವಾಗತಿಸಿದರು. ಫಿಸಿಯೋಥೆರಪಿಯ ಸಹಾಯಕ ಉಪನ್ಯಾಸಕ ಡಾ. ಸಾನಿಯಾ ಪ್ರವೀಣ್ ವ೦ದಿಸಿದರು.