23.1 C
Karnataka
Saturday, November 23, 2024

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ದಾಖಲಾತಿ: ಅರ್ಜಿ ಅಹ್ವಾನ

ಮಂಗಳೂರು: 2024-25ನೇ ಸಾಲಿಗೆ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ www.schooleducation.kar.nic.in ಮೂಲಕ ದಾಖಲಾತಿ ಅರ್ಜಿ ಮುದ್ರಿಸಿಕೊಂಡು ಭರ್ತಿ ಮಾಡಬೇಕು, ಅಥವಾ ಡಯಟ್ ವ್ಯವಸ್ಥಾಪಕ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಡಯಟ್‍ಗಳಿಗೆ ಸಲ್ಲಿಸುವುದು. ದಾಖಲಾತಿ ಅರ್ಜಿಗಳನ್ನು ಜೂನ್ 05 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಕೇಂದ್ರೀಕೃತ ದಾಖಲಾತಿ ಘಟಕದ ದೂರವಾಣಿ ಸಂಖ್ಯೆ:080-22483140 ಮತ್ತು 080-22483145 ಹಾಗೂ ವ್ಯವಸ್ಥಾಪಕ ಕೇಂದ್ರವಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜೈಲ್‍ರಸ್ತೆ, ಕೊಡಿಯಾಲ್‍ಬೈಲು, ಮಂಗಳೂರು ಅಥವಾ ದೂರವಾಣಿ ಸಂಖ್ಯೆ: 0824-2493052, ಮೊಬೈಲ್ ಸಂಖ್ಯೆ: 8747857070 ನ್ನು ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles