26.5 C
Karnataka
Saturday, November 23, 2024

ಪರಾರಿ – ಉಳಾಯಿಬೆಟ್ಟು – ಮಲ್ಲೂರು: ಘನ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ

ಮಂಗಳೂರು: ಮಂಗಳೂರು ತಾಲೂಕಿನ ಪರಾರಿ – ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ ರಲ್ಲಿ ಸೇತುವೆ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಬ೯೦ಧಿಸಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ಪರಾರಿ – ಉಳಾಯಿಬೆಟ್ಟು ಸೇತುವೆಯ ಮೂಲಕ ಪರಾರಿ – ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.
ಮಲ್ಲೂರು ಕಡೆಯಿಂದ ವಾಮಂಜೂರು (ರಾ.ಹೆ-169)/ಮಂಗಳೂರು ಕಡೆಗೆ ಸಂಚರಿಸುವ ಘನವಾಹನಗಳು: ವಾಮಂಜೂರು – ಪೆಮರ್ಂಕಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕೆತ್ತಿಕ್ಕಲ್ ಎಂಬಲ್ಲಿ ಅಥವಾ ಬೈತುರ್ಲಿ – ನೀರುಮಾರ್ಗ- ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಬೈತುರ್ಲಿ ಎಂಬಲ್ಲಿ ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ – 169 ನ್ನು ಸಂಪರ್ಕಿಸಿ, ವಾಮಂಜೂರು (ರಾ.ಹೆ – 169)/ಮಂಗಳೂರಿಗೆ ಸಂಚರಿಸುವುದು.
ವಾಮಂಜೂರು (ರಾ.ಹೆ-169)/ ಮಂಗಳೂರು ಕಡೆಯಿಂದ ಮಲ್ಲೂರು ಕಡೆಗೆ ಸಂಚರಿಸುವ ಘನವಾಹನಗಳು: ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169ರ ಕೆತ್ತಿಕ್ಕಲ್ ಎಂಬಲ್ಲಿ ವಾಮಂಜೂರು – ಪೆಮರ್ಂಕಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಅಥವಾ ಮಂಗಳೂರು – ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169ರ ಬೈತುರ್ಲಿ ಎಂಬಲ್ಲಿ ಬೈತುರ್ಲಿ – ನೀರುಮಾರ್ಗ- ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಸಂಚರಿಸಿ, ಪೆÀಮರ್ಂಕಿಪದವು ಎಂಬಲ್ಲಿ ಪರಾರಿ – ಉಳಾಯಿಬೆಟ್ಟು – ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸಿ ಮಲ್ಲೂರುಗೆ ಸಂಚರಿಸುವಂತೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles