ಮಂಗಳೂರು: ಬಹುನಿರೀಕ್ಷಿತ ಕರಾವಳಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಗುವುದು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 5 ಗಂಟೆಗೆ ಸ್ಪೀಕರ್ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕರಾವಳಿ ಉತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉತ್ಸವದಲ್ಲಿ ಕರಾವಳಿಯ ನೈಜ ಸ೦ಸ್ಕೃತಿ ಯ ಅನಾವರಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ವಿವಿಧ ಭಾಷೆ ಮತ್ತು ಜನಾಂಗಗಳ ಸಾಂಪ್ರದಾಯಿಕ ಸಾಂಸ್ಕøತಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಗುವುದು. ಕರಾವಳಿಯ ಪುರಾತನ ಸ೦ಸ್ಕೃತಿ ಹಾಗೂ ಖಾದ್ಯಗಳ ಮತ್ತು ತಿಂಡಿ ತಿನಿಸುಗಳ ತಯಾರಿಕೆ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ
ಕರ್ನಾಟಕ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಅಕಾಡೆಮಿಗಳು ಈ ಕಾರ್ಯಕ್ರಮಗಳನ್ನು ನಡೆಸಲು ಸಹಕಾರ ನೀಡಲಿದೆ .
ಇದಲ್ಲದೆ ವಿವಿಧ ಆಕರ್ಷಕ ಸಾಂ೦ಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರದರ್ಶನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಾವಳಿ ಉತ್ಸವ ಮೈದಾನದಲ್ಲಿ ಆಕರ್ಷಕ ವಸ್ತು ಪ್ರದರ್ಶನ ಮತ್ತು ಆಹಾರ ಮೇಳ ಡಿಸೆಂಬರ್ 21 ರಿಂದ ನಡೆಯಲಿದೆ.
ಡಿಸೆಂಬರ್ 21ರಂದು ಸಂಜೆ 4 ಗಂಟೆಗೆ ಕರಾವಳಿ ಉತ್ಸವದ ಉದ್ಘಾಟನೆ ಪ್ರಯುಕ್ತ ನಗರದ ಕೆನರಾ ಕಾಲೇಜಿನಿಂದ ಎಂ.ಜಿ ರಸ್ತೆಯಲ್ಲಿ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ. ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ವಷಾ೯ಂತ್ಯದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಜಿಲ್ಲೆಯ ಸಂಸ್ಕ್ರತಿ, ಮತ್ತು ಸಾಂಪ್ರದಾಯಿಕ ಸಾಹಿತ್ಯ ಹಾಗೂ ತಿಂಡಿ ತಿನಿಸುಗಳ ಅರಿವು ಮೂಡಿಸುವ ಉದ್ದೇಶವೂ ಕರಾವಳಿ ಉತ್ಸವದಲ್ಲಿ ಇದೆ
ಕರಾವಳಿ ಉತ್ಸವ ದಲ್ಲಿ ಡಿಸೆಂಬರ್ 21 ರಿಂದ ಜನವರಿ 19ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ವಿವರ.
ಡಿಸೆಂಬರ್ 21- ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ಮತ್ತು ಉದ್ಘಾಟನೆ
ಸ್ಥಳ : ಕರಾವಳಿ ಉತ್ಸವ ಮೈದಾನ ಲಾಲ್ ಬಾಗ್ ಮಂಗಳೂರು.
ಸಾಂಸ್ಕೃತಿಕ ವೈವಿಧ್ಯಗಳು
ಕರಾವಳಿ ಕರ್ನಾಟಕದ ಕಲೆ, ಕರಕುಶಲ ಮತ್ತು ಖಾದ್ಯಗಳ ಪ್ರದರ್ಶನ ( ಡಿಸೆಂಬರ್ 21ರಿಂದ ಜನವರಿ 19ರವರೆಗೆ )
ಬೀಚ್ ಉತ್ಸವ :-
ತಣ್ಣೀರು ಬಾವಿ ಬೀಚ್ ( ಡಿಸೆಂಬರ್ 28 ಮತ್ತು 29 )
ರಘು ದೀಕ್ಷಿತ್ ಅವರ ನೇರ ಸಂಗೀತ ಕಾರ್ಯಕ್ರಮ
ಅಂತರಾಷ್ಟ್ರೀಯ ಗಾಳಿಪಟ ಉತ್ಸವ :-
ತಣ್ಣೀರು ಬಾವಿ ಬೀಚ್ ( ಜನವರಿ 18 ಮತ್ತು 19 ರಂದು )
ಯುವ ಕಲಾ ಪ್ರಭ :-
ಕದ್ರಿ ಪಾರ್ಕ್ ( ಜನವರಿ 11 ಮತ್ತು 12 )
ಹೆಲಿಕಾಪ್ಟರ್ ರೈಡ್ : –
ಮೇರಿ ಹಿಲ್ ಹೆಲಿಪ್ಯಾಡ್ ( ಡಿಸೆಂಬರ್ 21ರಿಂದ 29 ರವರೆಗೆ )
ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರೋಬೋಟಿಕ್ ಚಿಟ್ಟೆ ಪ್ರದರ್ಶನ
ಕದ್ರಿ ಪಾರ್ಕ್, ಡಿಸೆಂಬರ್ 22 ರಿಂದ ಜನವರಿ 19 ರವರೆಗೆ ( ಸಂಜೆ 4ರಿಂದ 9 ಗಂಟೆಯವರೆಗೆ )
ಆಟೋ ಎಕ್ಸ್ ಪೊ ಮತ್ತು ಶ್ವಾನ ಪ್ರದರ್ಶನ
ಕದ್ರಿ ಉದ್ಯಾನವನ ( ಜನವರಿ 4 ಮತ್ತು 5 )
Saturday drive to karavali Festival