24.5 C
Karnataka
Thursday, April 30, 2026

ಬೆಂಗ್ರೆ : ಆಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶಿವಾಜಿ ಪಾರ್ಕ್‌ ಬಳಿ ಆಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಂಡು ಎಲ್ಲರ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಹಾರೈಸಿದರು.

ಗಂಗಾಧರ ಸಾಲ್ಯಾನ್, ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಲೋಕೇಶ್ ಸುವರ್ಣ, ಚೇತನ್ ಬೆಂಗ್ರೆ, ನರಸಿಂಹ ಶ್ರೀಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್, ಮೋಹನ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಮೀರಾ ಕರ್ಕೇರ, ಕೇಶವ ಗುರಿಕಾರ, ಹರಿಶ್ಚಂದ್ರ ಪುತ್ರನ್, ಸುರೇಂದ್ರ ಪಾಂಗಳ್, ಸುಂದರ ಸಾಲ್ಯಾನ್, ಪುಂಡಲಿಕ ಮೆಂಡನ್, ಮನೋಜ್ ಬೆಂಗ್ರೆ, ಸುಕೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles