24.8 C
Karnataka
Thursday, April 30, 2026

ಗಣೇಶಪುರ ಬ್ರಹ್ಮಕಲಶ : ಹೊರೆಕಾಣಿಕೆ ಶೋಭಾಯಾತ್ರೆ, ಉಗ್ರಾಣ ಮುಹೂರ್ತ

ಮ೦ಗಳೂರು: ‘ಭಾರತದ ಭವ್ಯತೆ, ದಿವ್ಯತೆ ಇರುವುದು ಆಧ್ಯಾತ್ಮಿಕತೆಯಲ್ಲಿ. ಎಲ್ಲ ನಾಯಕರಿಗೆ ಆದರ್ಶಪ್ರಾಯ ಶ್ರೀ ಮಹಾಗಣಪತಿ. ಒಗ್ಗಟ್ಟು ಎಂದರೆ ಅದು ಗಣಪತಿಯ ಸೇವೆ. ಎಲ್ಲರೂ ಒಗ್ಗಟ್ಟಾಗಿ ಸೇರಿ ಸೇವೆಯನ್ನು ಮಾಡುತ್ತಿದ್ದೀರಿ. ಶ್ರೀ ಕ್ಷೇತ್ರ ಗಣೇಶಪುರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮಹಾಗಣಪತಿಯ ದಯದಿಂದ ಯಶಸ್ವಿಯಾಗಲಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ತಾನ ಇಲ್ಲಿ ನಡೆಯುತ್ತಿರುವ ಜಾತ್ರೆ, ಸಹಸ್ರಕುಂಭ ಬ್ರಹ್ಮಕಲಶಾಭಿಷೇಕ, ಬ್ರಹ್ಮರಥ ಸಮರ್ಪಣೆ, ಭಜನಾ ಸಂಭ್ರಮೋತ್ಸವ, ನಾಗಮಂಡಲ, ಜಾರಂದಾಯ ನೇಮ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲದಿಂದ ಆರಂಭವಾದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೋತ್ಸವದ ಭವ್ಯ ಶೋಭಾಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಮಾತನಾಡಿ ‘ನಾವು ಸಮಾಜದಿಂದ ಪಡೆಯುತ್ತಲೇ ಇರುತ್ತೇವೆ. ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತಹ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳ ಮೂಲಕ ಹಿಂದು ಸಮಾಜಕ್ಕೆ ಶಕ್ತಿ ಬರುತ್ತದೆ ಎಂದು ಹೇಳಿದರು.

ಗಣೇಶಪುರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದರು. ಕಡಂಬೋಡಿ ಮಹಾಬಲ ಪೂಜಾರಿ, ಜೆ.ಡಿ. ವೀರಪ್ಪ, ಯಾದವ ಕೋಟ್ಯಾನ್, ಕಾರ್ಯನಿರ್ವಹಣಾಧಿಕಾರಿ ನವೀನ್, ಸದಾಶಿವ ಐತಾಳ್, ಅನಿಲ್ ಶೆಟ್ಟಿ ತೇವು, ಪ್ರಶಾಂತ್ ಮೂಡಾಯಿಕೋಡಿ, ಮಂಜುಕಾವ, ಸುಧಾಮ ಶೆಟ್ಟ, ಪ್ರವೀಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಿಲಕರಾಜ್ ಸ್ವಾಗತಿಸಿದರು, ಸುಧಾಕರ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ಶೋಭಾಯಾತ್ರೆಯು ಕೃಷ್ಣಾಪುರ, ಕಾಟಿಪಳ್ಳ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಗಣೇಶಪುರವನ್ನು ಪ್ರವೇಶಿಸಿತು.

ಗಣೇಶಪುರ ಕ್ಷೇತ್ರದಲ್ಲಿ ಶರವು ರಾಘವೇಂದ್ರ ಶಾಸ್ತ್ರಿ, ವಿಶ್ವೇಶ್ವರ ಬದವಿದೆ ಇವರ ಉಪಸ್ಥಿತಿಯಲ್ಲಿ ತೋರಣ ಮಹೋತ್ಸವ ಜರಗಿತು. ಕೆ.ಸಿ ನಾಗೇಂದ್ರ ಭಾರದ್ವಾಜ್ ಇವರಿಂದ ಶ್ರೀದೇವರ ಉಗ್ರಾಣ ಮುಹೂರ್ತ, ಸಾರ್ವಜನಿಕ ಅನ್ನ ಸಂತರ್ಪಣೆ ಯ ಉಗ್ರಾಣ ಮುಹೂರ್ತವನ್ನು ವೆ.ಮೂ ರಾಘವೇಂದ್ರ ಉಪಾಧ್ಯಾಯ, ಶ್ರೀ ಕ್ಷೇತ್ರ ಉಚ್ಚಿಲ ಇವರು ನೆರವೇರಿಸಿದರು. ಮಾಧವ ಭಟ್ ಕುಲ್ಲಂಗಾಲ್ ಉಪಸ್ಥಿತರಿದ್ದರು.ಮಹಾಗಣಪತಿ ದೇವರಿಗೆ ರಂಗಪೂಜೆ , ಭಕ್ತಿ – ಭಾವ – ಜಾನಪದ ಗೀತೆಗಳ ಸಂಭ್ರಮ, ಜೋಡು ಜೀಟಿಗೆ ಜನಪದ ನಾಟಕ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles