ಪುತ್ತೂರು : : ಮನೆಯ ಸಿಟೌಟ್ ನ ಮೇಲ್ಚಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಮೇಲ್ಚಾವಣೆ ಕುಸಿದು ಬಿದ್ದುಸೆಂಟ್ರಿಂಗ್ ಕೆಲಸದಾಳು ಮೃತಪಟ್ಟ ಘಟನೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ, ಪಾದಲಾಡಿ ಎಂಬಲ್ಲಿ ಬುಧವಾರ ಸ೦ಭವಿಸಿದೆ.ಪುತ್ತೂರು ಅರಿಯಡ್ಕ ನಿವಾಸಿ ಶೇಖರ್ ಕುಲಾಲ್ (45) ಮೃತಪಟ್ಟವರು.
ಶೇಖರ್ ಕುಲಾಲ್ ಅವರು ಬುಧವಾರ ಬೆಳಿಗ್ಗೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ, ಪಾದಲಾಡಿ ಎಂಬಲ್ಲಿ ಕಮಲ ಎಂಬವರ ಮನೆಗೆ ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದು, ಸದ್ರಿ ಮನೆಯ ಸಿಟೌಟ್ ನ ಮೇಲ್ಚಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಮೇಲ್ಚಾವಣೆ ಕುಸಿದು ಬಿದ್ದು ಶೇಖರ್ ಕುಲಾಲ್ ಹಾಗೂ ಕಾಂಟ್ರಾಕ್ಟರ್ ಸಂಜೀವ ಮೊಗೇರ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಶೇಖರ್ ಕುಲಾಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗಲೇ ಮೃತಪಟ್ಟಿರುತ್ತಾರೆ. ಕ್ಯೂರಿಂಗ್ ಆಗದಿರುವ ಸ್ಥಳದಲ್ಲಿ ಕೆಲಸ ಮಾಡುವುದು ಜೀವಕ್ಕೆ ಅಪಾಯ ಎಂದೂ ತಿಳಿದಿದ್ದರೂ ಕೂಡಾ ಶೇಖರ್ ಕುಲಾಲ್ ರವರನ್ನು ಕೆಲಸ ಮಾಡಿಸಿದ ಕಾಂಟ್ರ್ಯಾಕ್ಟರ್ ಸಂಜೀವ ಮೊಗೇರರವರು ಹಾಗೂ ಮನೆಯ ಮಾಲಕರಾದ ಕಮಲರವರ ನಿರ್ಲಕ್ಷ್ಯತನವೇ ಅವಘಡಕ್ಕೆಕಾರಣ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.