ಮ೦ಗಳೂರು : ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋವ೯ ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ..ಚಿಕ್ಕಮಗಳೂರು ಗ್ರಾಮಾ೦ತರದ ಬೈರಪುರ ಕಾತಿ೯ಕೆರೆ ನಿವಾಸಿ ಶಂಕರಗೌಡ ಎಂಬವರ ಪುತ್ರ ಪ್ರಸನ್ನ ಕುಮಾರ್ (36) ಆತ್ಮಹತ್ಯೆ ಮಾಡಿಕೊ೦ಡಿರುವ ಯುವಕ.ಮಧ್ಯಾಹ್ನ ಒ೦ದು ಗ೦ಟೆಯ ವೇಳೆಗೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು.
ತರಕಾರಿ ವ್ಯಾಪಾರಿಯಾಗಿರುವ ಪ್ರಸನ್ನ ಕುಮಾರ್ ಪತ್ನಿ ಹಾಗೂ 7 ಹಾಗೂ 5 ವಷ೯ದ ಎರಡು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.