33.8 C
Karnataka
Friday, May 1, 2026

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನ

ಮಂಗಳೂರು: ದ.ಕ ಜಿಲ್ಲೆಯ ಪ್ರವರ್ಗ “ಬಿ” ಮತ್ತು “ಸಿ” ವರ್ಗದ ಈ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಂತಿಮ ಸೆಪ್ಟೆಂಬರ್ 12 ರೊಳಗಾಗಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಸಲ್ಲಿಸಬೇಕು.
ಪ್ರಕಟಣೆಗೆ ಸ್ಪಂದಿಸಿ ಅರ್ಜಿಗಳು ಸ್ವೀಕೃತವಾಗದಿರುವ ದೇವಸ್ಥಾನಗಳಿಗೆ ಮರುಪ್ರಕಟಣೆ ಹೊರಡಿಸಲಾದ ವಿವರ:- 1)ಮೂಡಬಿದ್ರೆ ತಾಲೂಕಿನ ಧರೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, 2) ಮಾರೂರು ಶ್ರೀ ಗೋಪಿನಾಥ ಕೊಡಮಂತಾಯ ದೈವಸ್ಥಾನ, 3) ಹೊಸಬೆಟ್ಟು ಶ್ರೀ ಕೊಡಮಂತಾಯ ದೈವಸ್ಥಾನ. 4) ಬಂಟ್ವಾಳ ತಾಲೂಕಿನ ಸಜೀಪಮೂಡ ಶ್ರೀ ನಡುಬೈಲು ದೈವಗಳು ದೈವಸ್ಥಾನ, 5) ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, 6) ಕಡಬ ತಾಲೂಕಿನ ಕೊಣಾಜೆ ಕಡ್ಯ ಶ್ರೀ ಉಳ್ಳಾಕ್ಲು ದೈವಗಳ ದೈವಸ್ಥಾನ, 7)ಬಳ್ಪ ಶ್ರೀ ಸಂಪುಟ ನರಸಿಂಹ ದೇವಸ್ಥಾನ, ಮತ್ತು ಯಜ್ಞಮೂರ್ತಿ ದೇವಸ್ಥಾನ.
ವ್ಯವಸ್ಥಾಪನಾ ಸಮಿತಿ ಅವಧಿ ಮುಕ್ತಾಯಗೊಂಡ ದೇವಸ್ಥಾನಗಳಿಗೆ ಪ್ರಕಟಣೆ ಹೊರಡಿಸಲಾದ ವಿವರ:- 1)ಮಂಗಳೂರು ತಾಲೂಕು ಕೆಂಜಾರು ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನ, 2)ಗುರುಪುರ, ಮೂಳೂರು ಶ್ರೀ ಸೋಮನಾಥ ದೇವಸ್ಥಾನ, 3)ಮೂಡಬಿದ್ರೆ ತಾಲೂಕಿನ ಪ್ರಾಂತ್ಯ ಶ್ರೀ ನಾಗಬ್ರಹ್ಮ ದೇವಸ್ಥಾನ, 4) ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಶ್ರೀ ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನ, 5)ನಾವೂರು ಶ್ರೀ ಸುಬ್ರಾಯ ಮತ್ತು ವಿಷ್ಣುಮೂರ್ತಿ ದೇವಸ್ಥಾನ, 6)ಸುಳ್ಯ ತಾಲೂಕಿನ ಆಲೆಟ್ಟಿ ಶ್ರೀ ನಾಗಪಟ್ಟಣ ಸದಾಶಿವ ದೇವಸ್ಥಾನ, ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನ.
ಖಾಲಿ ಉಳಿದಿರುವ ಪ್ರವರ್ಗಗಳಿಗೆ ಪ್ರಕಟಣೆ ಹೊರಡಿಸಿರುವ ವಿವರ:- ಮುಲ್ಕಿ ತಾಲೂಕಿನ ಉಳೆಪಾಡಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನ (ಮಹಿಳೆ-1), ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ (ಮಹಿಳೆ-1, ಸಾಮಾನ್ಯ-1), ಬೆಳ್ತಂಗಡಿ ತಾಲೂಕಿನ, ಕೊಕ್ಕಡ ಗ್ರಾಮದ ಶ್ರೀ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನ (ಸಾಮಾನ್ಯ-1), ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಸಾಮಾನ್ಯ-1).
ಹೆಚ್ಚಿನ ಮಾಹಿತಿಗೆ ಅಥವಾ ನಿಗಧಿತ ಅರ್ಜಿ ನಮೂನೆಗೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ಸಂಪರ್ಕಿಸಬಹುದು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles