24.8 C
Karnataka
Thursday, April 30, 2026

ತಲಪಾಡಿ : ಆಟೋ ರಿಕ್ಷಾಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ ಸಾವು

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕ ಹಾಗೂ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒ೦ದೆ ಕುಟು೦ಬದ 5 ಮ೦ದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ತಲಪಾಡಿಯಲ್ಲಿ ಸಂಭವಿಸಿದೆ.
. ಆಟೋರಿಕ್ಷಾ ಚಾಲಕ ಹೈದರ್ ಅಲಿ (47), ಅಜ್ಜಿನಡ್ಕದ ಖತೀಜಾ (60),ಅವರ ತ೦ಗಿ ನಫೀಸಾ (52), ಖತೀಜಾ ಆವರ ಅಣ್ಣನ ಮಗಳು ಹಸೀನಾ(19), ಆಯೇಶಾ (19) ಸ೦ಬ೦ಧಿ ಮಹಿಳೆ ಅವ್ವಮ್ಮ(70) ಮೃತಪಟ್ಟವರು. ಕೆಎಸ್‌ಆರ್‌ಟಿಸಿ ಬಸ್ ಕಾಸರಗೋಡು ಕಡೆಯಿ೦ದ ಮ೦ಗಳೂರಿಗೆ ಬರುತ್ತಿದ್ದು ಆಟೋ ರಿಕ್ಷಾ ಕೆಸಿ ರೋಡ್‌ನಿಂದ ಮ೦ಜೇಶ್ವರ ಕಡೆಗೆ ತೆರಳುತ್ತಿತ್ತು. ಅಜ್ಜಿನಡ್ಕದ ಮುಳ್ಳುಗುಡ್ಡೆಯ ಈ ಕುಟುಂಬವು ಮಂಜೇಶ್ವರದ ಕುಂಜತ್ತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಈ ದುರ೦ತ ಸ೦ಭವಿಸಿದೆ.

ಘಟನೆಯಲ್ಲಿ ಬಸ್ ತಂಗುದಾಣದ ಬಳಿ ಬಸ್‌ ಗೆ ಕಾಯುತ್ತಿದ್ದ ಇಬ್ಬರು ಗ೦ಭೀರ ಗಾಯಗೊ೦ಡಿದ್ದಾರೆ. ಈ ಘಟನೆ ಮಧ್ಯಾಹ್ನ 1.30 ರ ಸುಮಾರಿಗೆ ನಡೆದಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles