24.5 C
Karnataka
Thursday, April 30, 2026

ನೈಋತ್ಯ ರೈಲ್ವೆಯ ಪ್ರಯಾಣಿಕ ಹಾಗೂ ಸರಕು ಗಳಿಕೆಯಲ್ಲಿ ದಾಖಲೆಯ ಬೆಳವಣಿಗೆ

ಬೆ೦ಗಳೂರು: ಆಗಸ್ಟ್ 2025 ರಲ್ಲಿ ನೈಋತ್ಯ ರೈಲ್ವೆ ಅತ್ಯುತ್ತಮ ಸಾಧನೆ ಮಾಡಿದ್ದು, 755 ಕೋಟಿ ರೂ.ಒಟ್ಟು ಆದಾಯ ಗಳಿಸಿದೆ ಮತ್ತು 4.22 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ ಇದುವರೆಗೆ ಆಗಸ್ಟ್ ತಿಂಗಳಲ್ಲಿ ದಾಖಲೆಯ ಕಾರ್ಯಕ್ಷಮತೆಯನ್ನು ಸಾಧಿಸಿದೆ.
ಪ್ರಯಾಣಿಕರ ಆದಾಯ 305 ಕೋಟಿ ರೂ.ಗೆ ಏರಿದ್ದು, 14.5 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಸರಕು ಸಾಗಣೆ ಆದಾಯ 418 ಕೋಟಿ ರೂ.ಗೆ ತಲುಪಿದ್ದು, ಇದಕ್ಕೆ ಕಬ್ಬಿಣದ ಅದಿರು, ಉಕ್ಕು, ಕಲ್ಲಿದ್ದಲು, ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿ, ರಸಗೊಬ್ಬರ, ಕಂಟೇನರ್‌ಗಳು ಹಾಗೂ ಆಹಾರ ಧಾನ್ಯಗಳ ದಾಖಲೆಯ ಲೋಡಿಂಗ್ ಮುಖ್ಯ ಕಾರಣವಾಗಿದೆ. ಇತರ ಕೋಚಿಂಗ್ ಸೇವೆಗಳ ಮೂಲಕ 24 ಕೋಟಿ ರೂ. , ಪಾರ್ಸೆಲ್ ಟ್ರಾಫಿಕ್‌ನಿಂದ13.5 ಕೋಟಿ ರೂ. ಮತ್ತು ವಿವಿಧ ಮೂಲಗಳಿಂದ 8.3 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಇದು ಪೂರಕ ವಿಭಾಗಗಳಲ್ಲಿಯೂ ಸಮತೋಲಿತ ಬೆಳವಣಿಗೆಯನ್ನು ತೋರಿಸುತ್ತದೆ.

ಪ್ರಯಾಣಿಕರ ಆದಾಯವು ಆಗಸ್ಟ್ 2024 ರ 264 ಕೋಟಿ ರೂ. ಯಿಂದ ಆಗಸ್ಟ್ 2025 ರ304.5 ಕೋಟಿ ರೂ. ಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 13.4 ಮಿಲಿಯನ್‌ನಿಂದ 14.5 ಮಿಲಿಯನ್‌ಗೆ ಏರಿಕೆಯಾಗಿ, ಉತ್ತಮ ಸಂಪರ್ಕ ಹಾಗೂ ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಸರಕು ವಿಭಾಗದಲ್ಲಿ ನೈಋತ್ಯ ರೈಲ್ವೆ ಆಗಸ್ಟ್ 2024 ರ 3.35 ಮಿಲಿಯನ್ ಟನ್ ಹೋಲಿಸಿದರೆ ಆಗಸ್ಟ್ 2025 ರಲ್ಲಿ 4.22 ಮಿಲಿಯನ್ ಟನ್ ಲೋಡಿಂಗ್ ಮಾಡಿ, 26.3% ಹೆಚ್ಚಳ ಸಾಧಿಸಿದೆ.

ಸರಕುಗಳ ವಿವರದಲ್ಲಿ, ಕಬ್ಬಿಣದ ಅದಿರು 1.68 ಮಿಲಿಯನ್ ಟನ್ (15.5% ಹೆಚ್ಚಳ), ಉಕ್ಕು 0.941 ಮಿಲಿಯನ್ ಟನ್ (70.5% ಹೆಚ್ಚಳ), ಕಲ್ಲಿದ್ದಲು 0.75 ಮಿಲಿಯನ್ ಟನ್ (22% ಹೆಚ್ಚಳ) ಮತ್ತು ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿ 0.23 ಮಿಲಿಯನ್ ಟನ್ (108% ಹೆಚ್ಚಳ) ಆಗಿದೆ. ರಸಗೊಬ್ಬರ 0.11 ಮಿಲಿಯನ್ ಟನ್ (7% ಹೆಚ್ಚಳ), ಕಂಟೇನರ್‌ಗಳು 0.09 ಮಿಲಿಯನ್ ಟನ್ (31.3% ಹೆಚ್ಚಳ) ಲೋಡ್ ಮಾಡಲ್ಪಟ್ಟಿದ್ದು, ಕಳೆದ ವರ್ಷ ಶೂನ್ಯಕ್ಕಿಂತ 0.01 ಮಿಲಿಯನ್ ಟನ್ ಆಹಾರ ಧಾನ್ಯಗಳು ಲೋಡ್ ಮಾಡಲಾಗಿದೆ. ಹೆಚ್ಚುವರಿಯಾಗಿ, 0.175 ಮಿಲಿಯನ್ ಟನ್ ಖನಿಜ ತೈಲ, 0.32 ಮಿಲಿಯನ್ ಟನ್ ಸಿಮೆಂಟ್ ಮತ್ತು 0.21 ಮಿಲಿಯನ್ ಟನ್ ಇತರೆ ಸರಕುಗಳು ಸಾಗಿಸಲಾಗಿದೆ.

ಇತರ ಆದಾಯ ಮೂಲಗಳೂ ಕಾರ್ಯಕ್ಷಮತೆಯನ್ನು ಬಲಪಡಿಸಿವೆ. ನೈಋತ್ಯ ರೈಲ್ವೆ ಇತರ ಕೋಚಿಂಗ್ ಸೇವೆಗಳಿಂದ 24 ಕೋಟಿ ರೂ., ಮತ್ತು ವಿವಿಧ ಆದಾಯಗಳಿಂದ 8.3 ಕೋಟಿರೂ. ಗಳಿಸಿದೆ. ಟಿಕೆಟ್ ಪರಿಶೀಲನೆ ಮೂಲಕ 4.16 ಕೋಟಿ ರೂ. ಮತ್ತು ದಂಡದ ರೂಪದಲ್ಲಿ 0.59 ಕೋಟಿ ರೂ. ಆದಾಯವಾಗಿದ್ದು, ವಾಣಿಜ್ಯ ಮೂಲಗಳಿಂದ 3.18 ಕೋಟಿ ರೂ. ಬಂದಿದೆ.

ಈ ಶ್ಲಾಘನೀಯ ಸಾಧನೆಯನ್ನು ಮೆಚ್ಚಿದ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಪ್ರಯಾಣಿಕ ಮತ್ತು ಸರಕು ವಿಭಾಗಗಳಲ್ಲಿ ದಾಖಲೆ ಫಲಿತಾಂಶ ತಂದುಕೊಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮರ್ಪಿತ ಶ್ರಮವನ್ನು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles