24.5 C
Karnataka
Thursday, April 30, 2026

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ “ರೋಹನ್ ಮರೀನಾ ಒನ್”

ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಭಾರತದ ರಿಯಲ್‌ ಎಸ್ಟೇಟ್‌ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ಗೂ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ.

ಮಂಗಳೂರಿನ ಸುರತ್ಕಲ್‌ ಎನ್‌ ಐ ಟಿಕೆ ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದ್ದು ಮತ್ತು ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ-ಲಕ್ಷುರಿ ಅಪಾರ್ಟ್ಮೆಂಟ್‌ ಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ “ದಿ ರಿಟ್ರೀಟ್” ಮತ್ತು 47 ಮಹಡಿಗಳಿರುವ “ದಿ ರಿಸಾರ್ಟ್” ಎಂಬ ಎರಡು ಟವರ್ ಗಳಿದ್ದು, ರೋಹನ್ ಮರೀನಾ ಒನ್ ಅನ್ನು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲಾಗಿ ನಿಲ್ಲುವಂತೆ ಮಾಡಿದೆ ಎ೦ದು ರೋಹನ್ ಕಾರ್ಪೊರೇಷನ್ ಎ೦ಡಿ ರೋಹನ್‌ ಮೊಂತೇರೋ ಪತ್ರಿಕಾಗೋಷ್ಥಿಯಲ್ಲಿ ತಿಳಿಸಿದರು.
.
ರೋಹನ್ ಮರೀನಾ ಒನ್ ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ, ಮನೆಮಾಲೀಕರೆಲ್ಲರೂ ಪ್ರತಿ ಮನೆಯಿಂದಲೂ ಸಾಗರದ ದೃಶ್ಯಗಳನ್ನು ಆಸ್ವಾದಿಸುವಂಥ ಐಷಾರಾಮಿ ಜೀವನವನ್ನು ಪಡೆಯಬಹುದಾಗಿದೆ. ಮನೆಗಳ ಒಳಭಾಗದ ವಿನ್ಯಾಸವೂ ಸಮುದ್ರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ರಚಿಸಲಾಗಿದೆ.“ರೋಹನ್‌ ಮರೀನಾ ಒನ್” ಎರಡು ಎತ್ತರದ ಟವರ್ಗಳನ್ನು ಹೊಂದಿದೆ
:● ದಿ ರಿಟ್ರೀಟ್ : 39 ಮಹಡಿಗಳ ಈ ಟವರ್‌ ನಲ್ಲಿ 2, 3 ಮತ್ತು 4 ಬಿಎಚ್‌ ಕೆ ಅಪಾರ್ಟ್ಮೆಂಟ್ ಗಳಿವೆ. ಪ್ರತಿಯೊಂದು ಮನೆಯನ್ನು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ರೂಪಿಸಿದ್ದು, ಇಲ್ಲಿನ ನಿವಾಸಿಗಳಿಗೆ ಐಷಾರಾಮಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನೀಡುತ್ತದೆ. ವಿಶಾಲ ಕಿಟಕಿಗಳು ಮತ್ತು ಬಾಲ್ಕನಿಗಳಿಂದ ಸಮುದ್ರದ ಪ್ರಶಾಂತ ಅಲೆಗಳ ದೃಶ್ಯವನ್ನು ದಿನವಿಡೀ ಆನಂದಿಸುವ ಅವಕಾಶ ದೊರೆಯುತ್ತದೆ. ಮೇಲ್ಮಹಡಿಯಲ್ಲಿರುವ ವಿಶಿಷ್ಟ ಇನ್ಫಿನಿಟಿ-ಎಡ್ಜ್ ಸ್ವಿಮ್ಮಿಂಗ್‌ ಪೂಲ್ ವಿಶ್ರಾಂತಿಯ ಅನುಭವವನ್ನು ಇಮ್ಮಡಿಗೊಳಿಸುತ್ತದೆ.

● ದಿ ರಿಸಾರ್ಟ್ : 47 ಮಹಡಿಗಳ ಈ ಗೋಪುರ, ಭಾರತದ ಅತ್ಯಂತ ಐಷಾರಾಮಿ ಟವರ್‌ಗಳಲ್ಲಿ ಒಂದಾಗಿದೆ. ಇಲ್ಲಿ 2 ಮತ್ತು 3 ಬಿಎಚ್‌ ಕೆಯ ವಿಶಾಲವಾದ ನಿವಾಸಗಳ ಜೊತೆಗೆ, ಆಕರ್ಷಕ ವಾಣಿಜ್ಯ ಅವಕಾಶಗಳೂ ಲಭ್ಯವಿದೆ. ದಿ ರಿಸಾರ್ಟ್, ಉತ್ತಮ ಜೀವನಶೈಲಿಯೊಂದಿಗೆ ಸುರಕ್ಷಿತ ಹೂಡಿಕೆ ಅವಕಾಶವನ್ನೂ ಒದಗಿಸುತ್ತದೆ. ಅತ್ಯುತ್ತಮ ಸೌಲಭ್ಯಗಳು, ಪ್ರೀಮಿಯಂ ಅನುಭವ ಮತ್ತು ಲಾಭದಾಯಕ ಪ್ರಯೋಜನಗಳೊಂದಿಗೆ ಇದು ಅತ್ಯುನ್ನತ ಐಷಾರಾಮಿ ಜೀವನವನ್ನು ಖಚಿತಪಡಿಸುತ್ತದೆ.

ಐಷಾರಾಮಿ ಜೀವನಶೈಲಿಯೊಂದಿಗೆ, ಕಡಲತೀರದ ಪ್ರಶಾಂತತೆ ಮತ್ತು ವಿಶ್ವದರ್ಜೆಯ ಸವಲತ್ತುಗಳ ಸಮ್ಮಿಲನವಾಗಿ “ರೋಹನ್‌ ಮರೀನಾ ಒನ್” ಅನ್ನು ನಾವು ಪರಿಚಯಿಸುತ್ತಿದ್ದು, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ರೋಹನ್ ಮರಿನಾ ಒನ್ ನಮ್ಮ ಕನಸಿನ ಯೋಜನೆ, ಮತ್ತು ಈ ಯೋಜನೆ ಕರಾವಳಿಯ ಜೀವನಕ್ಕೆ ಹೊಸ ಅರ್ಥವನ್ನು ನೀಡುಲು ನಮ್ಮ ಪ್ರಯತ್ನವಾಗಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಿಂದಲೂ ಅರಬ್ಬಿ ಸಮುದ್ರದ ಆಹ್ಲಾದಕರ ನೋಟ ದೊರಕುವುದು ದೇಶದಲ್ಲಿ ಇದೇ ಮೊದಲು. ಪ್ರತಿದಿನ ಪ್ರಕೃತಿಯ ಅದ್ಭುತ ನೋಟದೊಂದಿಗೆ ದಿನವನ್ನು ಆರಂಭಿಸುವ ಅವಕಾಶವನ್ನು ನೀಡುತ್ತಿರುವುದು ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಮತ್ತು ನಮ್ಮ ಕರಾವಳಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಎ೦ದು ರೋಹನ್‌ ಮೊಂತೇರೋ ವಿವರಿಸಿದರು.

ಕಳೆದ 32 ವರ್ಷಗಳಿಂದ, ರೋಹನ್ ಕಾರ್ಪೊರೇಷನ್ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸ, ವಿನೂತನ ಪ್ರಯೋಗ ಮತ್ತು ಉತ್ಕೃಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ. ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಸಂಸ್ಥೆಯು ದಿಟ್ಟತನದಿಂದ ಮುಂದುವರೆಸಿದೆ. ಮಂಗಳೂರಿನ ಪ್ರಮುಖ ಸ್ಥಳಗಳಲ್ಲಿ 25ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗರಿಮೆಯನ್ನು ಹೊಂದಿರುವ ರೋಹನ್ ಕಾರ್ಪೊರೇಷನ್, ಸುಂದರ, ಗುಣಮಟ್ಟ ಮತ್ತು ದೀರ್ಘಬಾಳಿಕೆಯ ವಿಶ್ವಾಸವನ್ನು ಧೃಡಪಡಿಸುವ ಯೋಜನೆಗಳನ್ನು ನೀಡುವುದರಲ್ಲಿ ಪ್ರಸಿದ್ಧವಾಗಿದೆ.
ಎಸ್‌ ಡಿಸಿಸಿ ಬ್ಯಾ೦ಕ್‌ ಅಧ್ಯಕ್ಷ ಡಾ. ಎ೦.ಎನ್. ರಾಜೇ೦ದ್ರ ಕುಮಾರ್‌ ಅವರು ಯೋಜನೆಯ ಬ್ರೋಚರ್‌ ಬಿಡುಗಡೆ ಮಾಡಿದರು. , ರೋಹನ್ ಕಾರ್ಪೊರೇಷನ್ ನಿದೇ೯ಶಕ ಡಿಯಾನ್‌ ಮೊ೦ತೆರೊ , ಜಿಎ೦ ಸುಮನಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles