ಮ೦ಗಳೂರು: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು ಸೆಪ್ಟೆಂಬರ್ 7 ರಂದು ಮಂಗಳೂರಿನ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಅಧ್ಯಕ್ಷತೆ ವಹಿಸಿದರು. ಸಂಘದ ಕಾರ್ಯದರ್ಶಿ ವಿ. ಎಂ. ಸತೀಶನ್ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಖ್ಯಾತ ಬಹುಭಾಷಾ ಚಲನಚಿತ್ರ ನಟ ಡಾ. ಸುಮನ್ ತಲ್ವಾರ್ ಅವರು ನಾಯರ್ ಮತ್ತು ಕೇರಳ ಸಮುದಾಯವು ಭಾರತೀಯ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು.ಕೇರಳದ ಕೊಟ್ಟಾರಕ್ಕರದ ಸಂಶೋಧನಾ ವಿದ್ಯಾರ್ಥಿನಿ, ಧಾರ್ಮಿಕ ವಕ್ತಾರೆ, ನಿರೂಪಕಿ ಪ್ರಿಯಂವದ ಕೆ. ಪಿಶಾರಡಿ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪಿ. ವಿ. ಅಭಿಲಾಶ್, ಟ್ರಸ್ಟಿ, ಮೂಕಾಂಬಿಕಾ ದೇವಾಲಯ, ಕೊಲ್ಲೂರು,ಎನ್. ಡಿ. ಸತೀಶ್, ಉಪಾಧ್ಯಕ್ಷ KNSS,ವಿನೋದ್ ಎ. ಕೆ., CGM, ಯೂನಿಯನ್ ಬ್ಯಾಂಕ್, ಮಂಗಳೂರು,ಶಾಂತರಾಮ ಶೆಟ್ಟಿ, ಅಧ್ಯಕ್ಷರು, ರೆಡ್ ಕ್ರಾಸ್ ಸೊಸೈಟಿ, ಮಂಗಳೂರು, ಸ್ವರಾಜ್ ಶೆಟ್ಟಿ, ನಿರ್ದೇಶಕ ಮತ್ತು ನಟ,ಸತೀಶ್ ಕುಂಪಳ, ಅಧ್ಯಕ್ಷರು, ಬಿಜೆಪಿ ದಕ್ಷಿಣ ಕನ್ನಡ,ರಮಾನಾಥ ರೈ, ಮಾಜಿ ಸಚಿವರು , ಐವನ್ ಡಿ’ಸೋಜಾ, ವಿಧಾನ ಪರಿಷತ್ ಸದಸ್ಯರು, ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯರು, ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟ್ಸ್ ಸಂಘ, ಮಂಗಳೂರು, ಕಿರಣ್ ಜೋಗಿ, ಅಧ್ಯಕ್ಷರು, ಜೋಗಿ ಸೌಹಾರ್ದಕ ಸಂಘ, ಅಶೋಕ್ ಟಿ. ಎ., ಉಪಾಧ್ಯಕ್ಷರು, ಕೇರಳ ಸಮಾಜಂ ,ರಿಂಜು, ಅಧ್ಯಕ್ಷರು, ಮಲಯಾಳಿ ಸಮಾಜಂ ಮಂಗಳೂರು,ಸಂದೇಶ್ ಎ., ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮಾಜಂ ಮಂಗಳೂರು,ನಿಕ್ಲಾಬೋಸ್, ಅಧ್ಯಕ್ಷರು, ಕೈರಾಳಿ ಕಲಾ ವೇದಿ ಸೂರತ್ಕಲ್, ಕೆ. ಕೆ. ರಾಧಾಕೃಷ್ಣನ್, ಅಧ್ಯಕ್ಷರು, ಕರಾವಳಿ ಫ್ರೆಂಡ್ಸ್ ಕ್ಲಬ್ , ಮಂಗಳೂರು,ದಿನೇಶ್ ಮಂದನ್, ಶ್ರಿ ನಾರಾಯಣಾ ಸಂಸ್ಕಾರಿಕಾ ಕಲಾ ವೇದಿ (ರಿ) ಮಂಗಳೂರು,ಕೃಷ್ಣನ್ ನಾಯರ್, ಅಧ್ಯಕ್ಷರು, KNSS ಕರಯೋಗಂ ಸುಳ್ಯ, ಮೋಹನ್ ದಾಸ್, ಅಧ್ಯಕ್ಷರು, KNSS ಕರಯೋಗಂ ಉಡುಪಿ
ಮಹಿಳಾ ವಿಭಾಗ ಕಾರ್ಯದರ್ಶಿಲತಾ ದಿವಾಕರ್, ಖಜಾಂಚಿ ಜಯಲಕ್ಷ್ಮಿ ಚಂದ್ರಮೋಹನ್, ಮಂಡಳಿ ಸದಸ್ಯರು ಎಂ. ವಿ. ರಾಜನ್ ಮತ್ತು ಪಿ. ಕೆ. ಎಸ್. ಪಿಳ್ಳೈ ಹಾಗೂ ಇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು: .
ಸಂಘದ ಖಜಾಂಚಿ ರವೀಂದ್ರನಾಥ ಧನ್ಯವಾದಗಳನ್ನು ಅರ್ಪಿಸಿದರು.ಕಾರ್ಯಕ್ರಮವನ್ನು ನವ್ಯಾ ಕೂರುಪ್ ಮತ್ತು ನೀತು ಲಕ್ಷ್ಮಿ ಅವರು ನಿರೂಪಿಸಿದರು.


