ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಶಿವಗಿರಿಯ ಹೆಸರಿನಲ್ಲಿ, ಮತ್ತವರ ತತ್ವದಂತೆ ಬದುಕಿ ಬಾಳಿದ ಜಯ ಸುವರ್ಣರ ನೆನಪಿನಲ್ಲಿ ನೀಡಿದ ಈ ಸನ್ಮಾನ ನನ್ನ ಬದುಕಿನಲ್ಲಿ
ಅಮೂಲ್ಯ ವಾಗಿದೆ. ಕರ್ನಾಟಕ ಸರಕಾರ. ನಾನು ಹುಟ್ಟಿರುವ ಸಮಾಜ ಹಾಗೂ ನೂರಾರು ಸನ್ಮಾನಗಳನ್ನು ಸ್ವೀಕರಿಸಿಕೊಂಡಿದ್ದೆ ಆದರೆ ಬಿಲ್ಲವ ಸಮಾಜ ನೀಡಿರುವ ಈ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ ., ಬಿಲ್ಲವ ಸಮಾಜ ಇಂದು ಈ ಮಟ್ಟದಲ್ಲಿ ಬಲಿಷ್ಠವಾಗಲು ಜಯ ಸುವರ್ಣರು ಮತ್ತು ಜನಾರ್ಧನ ಪೂಜಾರಿ ಅವರು ಕಾರಣರಾಗಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು,
ಅವರು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಜಯಲೀಲಾ ಬ್ಯಾಂಕ್ವೆಟ್ ಹಾಲ್, ಜಯ ಸಿ ಸುವರ್ಣ ಮಾರ್ಗ, ಗೋರೆಗಾಂವ್ (ಪೂರ್ವ), ಇಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಅಧ್ಯಕ್ಷತೆಯಲ್ಲಿನಡೆದ ಧಾರ್ಮಿಕ ಸಭೆಯಲ್ಲಿ ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ “ಶಿವಗಿರಿ ಸಮ್ಮಾನ್” ಪ್ರಶಸ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಪ್ರಶಸ್ತಿ ನೀಡಿ ಅಭಿನ೦ದಿಸಿದರು. ,
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಗಣೇಶ್ ಆರ್. ಪೂಜಾರಿ,ವೇದಪ್ರಕಾಶ್ ಶ್ರೀಯಾನ್ , ನಿತ್ಯಾನಂದ ಡಿ. ಕೋಟ್ಯಾನ್, ವಿದ್ಯಾನಂದ್ ಎಸ್. ಕರ್ಕೆರ , ಪುರಂದರ ಪೂಜಾರಿ, ಮನೋಜ್ ಹೆಗ್ಡೆ, ಹ್ಯಾರಿ ಸಿಕ್ಕೇರಾ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಮಾಜದಲ್ಲಿ ವಿಶೇಷ ಸೇವೆಗೈದ ಜಲಜಾ ಸೂರು ಪೂಜಾರಿ ವಡಾಲ, ಮತ್ತು ಹೈಕೋರ್ಟ್ ನ ನ್ಯಾಯವಾದಿ ಅಡ್ವಕೇಟ್ ಜಿ .ಸಿ. ಪೂಜಾರಿ, ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.


