18 C
Karnataka
Friday, November 22, 2024

ಚಾಟಿಂಗ್‌ ಮೂಲಕ 6.96 ಲಕ್ಷ ರೂ.ದೋಚಿದ ಮಹಿಳೆ!

ಮ೦ಗಳೂರು: ಚಾಟಿಂಗ್‌ ಮೂಲಕ ವ್ಯಕ್ತಿಯೋವ೯ರ ವಿಶ್ವಾಸ ಗಳಿಸಿ ಮಹಿಳೆಯೊಬ್ಬರು 6,96,500 ರೂ. ಪಡೆದು ವಂಚಿಸಿದ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗುರಿಪಳ್ಳ ನಿವಾಸಿ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು FACEBOOK ಮೂಲಕ ಮಹಿಳೆಯೊಬ್ಬರ ಪರಿಚಯವಾಗಿ ಚಾಟಿಂಗ್‌ ನಡೆಸುತ್ತಿದ್ದರು.ಚಾಟಿಂಗ್‌ ಮೂಲಕ ವಿಶ್ವಾಸ ಗಳಿಸಿದ ಮಹಿಳೆ ವಿವಿಧ ಕಾರಣಗಳನ್ನು ನೀಡಿ ತನ್ನ ಬೇರೆಬೇರೆ ಖಾತೆಗಳಿಗೆ ಒಟ್ಟು ರೂ.6,96,500 ಹಣವನ್ನು ಪಡೆದು ವಂಚಿಸಿರುವುದಾಗಿ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಸೆನ್‌ ಅಪರಾಧ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles