ಮಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೆಪ್ಟೆಂಬರ್ 24 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಬೆಳಿಗ್ಗೆ 10:05- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 10:30 – ನಗರದ ಟಿಎಂಎ ಫೈ ಕನ್ವೆಂಷನ್ ಸೆಂಟರ್ನಲ್ಲಿ ಮಂಗಳೂರು ಟೆಕ್ನೋವಂಜಾ 2025- ಕಾರ್ಯಕ್ರಮ,. ಮಧ್ಯಾಹ್ನ 12 – ದೇರಳಕಟ್ಟೆಯ ನಿಟ್ಟೆ ಯುನಿವರ್ಸಿಟಿ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ಇಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೈನ್ ಇನ್ನೋವೇಶನ್ಗೆ ಭೇಟಿ, 1:30 – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ, 3 ಗ೦ಟೆಗೆ ಮಂಗಳೂರು Wrkwrk ಕಚೇರಿಗೆ ಭೇಟಿ, ಸಂಜೆ 4 ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ, 6:15 – ಮಂಗಳೂರಿನಿಂದ ಬೆಂಗಳೂರಿಗೆ ಸಚಿವರು ತೆರಳಲಿದ್ದಾರೆ.


