24.9 C
Karnataka
Thursday, April 30, 2026

ದಸರಾ ಸಿಎಂ ಕಪ್ ರಾಜ್ಯಮಟ್ಟದ ಸ್ಪರ್ಧೆ : ಹರ್ಷಲ್‌ಗೆ ಬೆಳ್ಳಿ ಪದಕ

ಮಂಗಳೂರು: ಮೈಸೂರಿನಲ್ಲಿ ಬುಧವಾರ(ಸೆ.೨೪)ರಂದು ನಡೆದ ‘ದಸರಾ ಸಿಎಂ ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ತೌಲೋ ವಿಭಾಗದಲ್ಲಿ ಮಂಗಳೂರಿನ ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಹರ್ಷಲ್ ಎನ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಹರ್ಷಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರು ಪಚ್ಚನಾಡಿ ಬಂಗೇರುಸೀಮೆ ನಿವಾಸಿ ನವೀನ್ ಚಂದ್ರ ಮತ್ತು ಜಯಶ್ರೀ ದಂಪತಿಯ ಪುತ್ರನಾಗಿದ್ದು,ಮಂಗಳೂರಿನ ಇಮ್ಮೋರ್ಟಲ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್‌ನೆಸ್ ಅಕಾಡೆಮಿಯ ತರಬೇತುದಾರ ರೋಹನ್ ಎಸ್. ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles