24.5 C
Karnataka
Thursday, April 30, 2026

ಕೊಂಕಣಿ ಲೇಖಕರ ಸಂಘ, ಕರ್ನಾಟಕ – ವಾರ್ಷಿಕ ಸಭೆ

ಮ೦ಗಳೂರು: ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ಶ್ರೀ ರಿಚ್ಚಾರ್ಡ್ ಮೊರಸ್ ಖರ್ಚು–ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ ಅವರೊಂದಿಗೆ ಖ್ಯಾತ ಕವಿ–ಲೇಖಕ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು.

ಸಭೆಗೆ ಶ್ರೀ ಡೊಲ್ಫಿ ಕಾಸ್ಸಿಯಾ ಪ್ರಾಸ್ತವಿಕ ಭಾಷಣ ಮಾಡಿ ಸ್ವಾಗತ ಮಾಡಿದರು. ಹೆನ್ರಿ ಮಸ್ಕರೇನಸ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಅ್ಯನಿ ಕ್ಯಾಸ್ತಲಿನೊ ನುಡಿಗಟ್ಟುಗಳೊಂದಿಗೆ ಸುಂದರವಾಗಿ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles