24.5 C
Karnataka
Thursday, April 30, 2026

ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ರೆ.ಡಾ. ಫ್ರಾನ್ಸಿಸ್ ಸೆರಾವೊ ಎಸ್‌.ಜೆ. ಅವರ ಪದಗ್ರಹಣ

ಮೈಸೂರು: ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ರೆ.ಡಾ. ಫ್ರಾನ್ಸಿಸ್ ಸೆರಾವೊ ಎಸ್‌.ಜೆ. ಅವರ ಪದಗ್ರಹಣ ಸಮಾರ೦ಭ ಐತಿಹಾಸಿಕ ಸಂತ ಜೋಸೆಫ್ ಕ್ಯಾಥೆಡ್ರಲ್ (ಸೇಂಟ್ ಫಿಲೋಮಿನಾ ದೇವಾಲಯ)ದಲ್ಲಿ ಮ೦ಗಳವಾರ ಜರಗಿತು.
ಧಾರ್ಮಿಕ ವಿಧಿಯನ್ನು ಬೆಂಗಳೂರು ಆರ್ಚ್‌ಬಿಷಪ್ ರೆ.ಡಾ. ಪೀಟರ್ ಮಚಾದೊ, ಅವರು ನೆರವೇರಿಸಿದರು. ಪೋಪ್ ಲಿಯೋ XIV ಅವರು ಬಿಷಪ್ ಫ್ರಾನ್ಸಿಸ್ ಸೆರಾವೊ ಅವರನ್ನು ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದರು. ಸೆರಾವ್ ಅವರು ಇದರ ಮೊದಲು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಆಗಿ ಸೇವೆ ಸಲ್ಲಿಸಿದ್ದರು.

ಪವಿತ್ರ ಬಲಿದಾನದ ಆಚರಣೆಯ ನಂತರ, ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ನುನ್ ಸಿಯೋ ರೆ. ಲಿಯೋಪೋಲ್ಡೋ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ 2023ರ ಜನವರಿಯಿಂದ ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಆಡಳಿತಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಅತಿ. ರೆ. ಡಾ. ಬರ್ನರ್ಡ್ ಮೋರಾಸ್ ಅವರಿಗೆ ವಿದಾಯ ಗೌರವವೂ ಸಲ್ಲಿಸಲಾಯಿತು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಭವ್ಯ ಸಮಾರಂಭದಲ್ಲಿ ಪೋಪ್ ಅವರ ನೇಮಕಾತಿ ಘೋಷಣಾ ಪತ್ರ ವಾಚಿಸಲಾಯಿತು, ಇದರೊಂದಿಗೆ ಬಿಷಪ್ ಸೆರಾವೊ ಅವರ ಪಾಸ್ಟರಲ್ ನಾಯಕತ್ವ ಮೈಸೂರು ಧರ್ಮಪ್ರಾಂತ್ಯದಲ್ಲಿ ಅಧಿಕೃತವಾಗಿ ಆರಂಭವಾಯಿತು.

ಪದಗ್ರಹಣದ ನಂತರ, ಬಿಷಪ್ ಸೆರಾವೊ ಅವರನ್ನು ಅನೇಕ ಬಿಷಪ್‌ಗಳು, ಧರ್ಮ ಗುರು ಗಳು ಧರ್ಮ ಭಗಿಣಿಯರು ಧಾರ್ಮಿಕ ನಾಯಕರು ಮತ್ತು ನೂರಾರು ಭಕ್ತರು ಅಭಿನಂದಿಸಿದರು.

1959ರ ಆಗಸ್ಟ್ 15ರಂದು ಮೂಡಬಿದ್ರೆಯಲ್ಲಿ ಜನಿಸಿದ ಬಿಷಪ್ ಫ್ರಾನ್ಸಿಸ್ ಸೆರಾವೊ (66) ಅವರು ಆಳವಾದ ಧಾರ್ಮಿಕ ಕುಟುಂಬದಿಂದ ಬಂದವರು. ಅವರು 11 ಮಕ್ಕಳ ಪೈಕಿ ಕಿರಿಯರು — ಅವರಲ್ಲಿ ಆರು ಮಂದಿ ಸಹೋದರರು ಪಾದ್ರಿಗಳು ಮತ್ತು ಒಬ್ಬ ಸಹೋದರಿ ಸನ್ಯಾಸಿನಿ. ಅವರು 1992ರ ಏಪ್ರಿಲ್ 30ರಂದು ಪಾದ್ರಿಯಾಗಿ ನೇಮಕಗೊಂಡು, ತಮ್ಮ ಆರಂಭಿಕ ಧಾರ್ಮಿಕ ಸೇವೆಯನ್ನು ಆನೇಕಲ್ (ಬೆಂಗಳೂರು ಆರ್ಚ್‌ಡಯೋಸಿಸ್) ಮತ್ತು ಮುಂಡಗೋಡ (ಕಾರವಾರ ಧರ್ಮಪ್ರಾಂತ್ಯ)ಗಳಲ್ಲಿ ದಲಿತ ಮತ್ತು ಜನಜಾತಿ ಸಮುದಾಯಗಳಿಗೆ ಸಮರ್ಪಿಸಿದ್ದರು.
ಮೈಸೂರು ಧರ್ಮಪ್ರಾಂತ್ಯ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 90 ಚರ್ಚ್ ಗಳು ಇವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles