ಮಂಗಳೂರು: ವಿಚಕ್ಷಣಾ ಜಾಗೃತಿ ಅಭಿಯಾನ 2025 ರ ಸಂದರ್ಭದಲ್ಲಿ, ಅ.15ರ೦ದು ಬ್ಯಾಂಕ್ ಆಫ್ ಬರೋಡಾ ಮಂಗಳೂರಿನ ವಲಯ ಕಚೇರಿಯ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಅಳಪೆ ಪಡಿಲ್ ಮತ್ತು ನೀರುಮಾರ್ಗ ಶಾಖೆಗಳಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ವಲಯ ಜಾಗೃತ ಮುಖ್ಯಸ್ಥ ಮನೀಶ್ ಜೈಸ್ವಾಲ್ ಅವರು ಪ್ರಾಮಾಣಿಕತೆ ಮತ್ತು ಸಮಗ್ರತೆ ನಮ್ಮ ಜೀವನ ವಿಧಾನವಾಗಬೇಕು ಎಂಬ ಸಂದೇಶವನ್ನು ಯಶಸ್ವಿಯಾಗಿ ಹರಡಬೇಕು ಎಂದು ಹೇಳಿದರು. ಅಳಪೆ ಪಡೀಲ್ ಶಾಖೆಯಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕ ಪುನೀತ್ ಅವರು ಸಮಗ್ರತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದರು. ನೀರುಮಾರ್ಗ ಶಾಖೆಯಲ್ಲಿ, ಹಿರಿಯ ಶಾಖಾ ವ್ಯವಸ್ಥಾಪಕರಾದ ನಾಗಲಕ್ಷ್ಮಿ ಅವರು ವಿಚಕ್ಷಣಾ ಜಾಗೃತಿ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿಮಾ೯ಣದ ಬಗ್ಗೆ ವಿವರಿಸಿದರು.


