24.5 C
Karnataka
Thursday, April 30, 2026

ಕೆನರಾ ಬ್ಯಾಂಕ್ ವತಿಯಿಂದ ಪಿಲಿಕುಳದಲ್ಲಿ ನೂತನ ಬ್ಯಾಂಕಿಂಗ್ ಕಿಯೋಸ್ಕ್

ಮ೦ಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವತಿಯಿಂದ ಪಿಲಿಕುಳದಲ್ಲಿ ನೂತನ ಕಿಯಾಸ್ಕ್ ಅನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಜಿಲ್ಲಾಧಿಕಾರಿ. ಈ ಕಿಯಾಸ್ಕ್ ಉದ್ಘಾಟನೆಯಿಂದ ಪಿಲಿಕುಳ ನಿಸರ್ಗಧಾಮ ಸಂದರ್ಶಕರಿಗೆ , ಸಾರ್ವಜನಿಕರಿಗೆ ಇ-ಟಿಕೇಟ್ ಸೇವೆಗಳು ಸುಲಭವಾಗಿ ಹಾಗೂ ತ್ವರಿತವಾಗಿ ಲಭ್ಯವಾಗಲಿದೆ. ಇಂತಹ ಬ್ಯಾಂಕಿಂಗ್‌ ಸೌಲಭ್ಯ ಒದಗಿಸಿದ ಕೆನರಾ ಬ್ಯಾಂಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು,
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ್ ಖಾರ್ಬರಿ ಭಾಗವಹಿಸಿ ಇಂತಹ ಬ್ಯಾಂಕಿಂಗ್ ಉಪಕ್ರಮಗಳು ಆರ್ಥಿಕ ಸೇರ್ಪಡೆ, ಡಿಜಿಟಲ್ ವ್ಯವಹಾರದ ಉತ್ತೇಜನಕ್ಕೆ ಪ್ರಮುಖವಾಗಿ ಪಿಲಿಕುಳ ಸಂದರ್ಶಕರಿಗೆ ಸಾರ್ವಜನಿಕರಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಪ್ರಧಾನ ವ್ಯವಸ್ಥಾಪಕರುಮಂಜುನಾಥ್, ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕರು ಶ್ರೀಮತಿ ಲತಾ ಕುರುಪು, ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಶ್ರೀಮತಿ ಕವಿತಾ ಎನ್. ಶೆಟ್ಟಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಶೆಟ್ಟಿ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪಿಲಿಕುಳದಲ್ಲಿ ಆರಂಭಗೊಂಡ ಈ ಕಿಯಾಸ್ಕ್ ಮೂಲಕ ಪಾವತಿ ಸಂಬಂಧಿತ ಸೇವೆಗಳು, ಹಾಗೂ ಇತರೆ ಮೂಲಭೂತ ಬ್ಯಾಂಕಿಂಗ್ ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗಲಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles