ಮಂಗಳೂರು: ಭಾರತೀಯ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (IISDR)ವು, ಭಾರತೀಯ ಕೈಗಾರಿಕಾ ಒಕ್ಕೂಟ (CII) ಮಂಗಳೂರು, ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (MMA) ಹಾಗೂ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್ (KIA) ಅವರ ಸಹಯೋಗದಲ್ಲಿ, “ಕಾರ್ಮಿಕ ಸಂಹಿತೆಗಳ ವಿಶ್ಲೇಷಣೆ – ಭಾರತದ ಕಾರ್ಮಿಕ ಸುಧಾರಣೆಯ ಹೊಸ ಯುಗವನ್ನು ಅರ್ಥಮಾಡಿಕೊಳ್ಳುವುದು” ಕಾರ್ಯಾಗಾರ ನಗರದ ಡಾ. ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ಜರಗಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎಂ ಆರ್ ಪಿ ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಅವರು ಸ್ವಾತಂತ್ರ್ಯೋತ್ತರ ಭಾರತದ ಬಳಿಕ ಕಾರ್ಮಿಕ ನಿಯಂತ್ರಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಪರಿವರ್ತನೆಯೊಂದು ನಡೆಯುತ್ತಿದ್ದು, 29 ಕೇಂದ್ರ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಮಗ್ರ ಕಾರ್ಮಿಕ ಸಂಹಿತೆಗಳಾಗಿ ಒಗ್ಗೂಡಿಸಲಾಗಿದೆ ಎಂದು ಹೇಳಿದರು. ಈ ಸುಧಾರಣೆಗಳು ಕೇವಲ ಕಾನೂನು ಪುನರ್‌ರಚನೆಯಷ್ಟೇ ಅಲ್ಲದೆ, ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಕೆಲಸ, ಕಾರ್ಮಿಕರು, ಅನುಸರಣೆ ಹಾಗೂ ಕೈಗಾರಿಕಾ ಸಂಬಂಧಗಳನ್ನು ನೋಡುವ ದೃಷ್ಟಿಕೋನದಲ್ಲಿಯೇ ಮೂಲಭೂತ ಬದಲಾವಣೆ ತಂದಿವೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗ ವಹಿಸಿ ಮಾತನಾಡಿದ ಕೇಂದ್ರ ಸರಕಾರದ ನಿವೃತ್ತ ಮುಖ್ಯ ಕಾರ್ಮಿಕ ಆಯುಕ್ತ ಡಾ. ಓಂಕಾರ್ ಶರ್ಮಾ ಹೊಸ ಕಾರ್ಮಿಕ ಸಂಹಿತೆಗಳ ತತ್ತ್ವ ಮತ್ತು ಪ್ರಾಯೋಗಿಕ ಮಹತ್ವವನ್ನು ವಿವರಿಸಿದರು. 29 ಕೇಂದ್ರ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಮಗ್ರ ಸಂಹಿತೆಗಳಾಗಿ ಸಂಯೋಜಿಸುವುದು ಗೊಂದಲ, ಆವರ್ತನೆ ಮತ್ತು ಅಸ್ಪಷ್ಟತೆಯನ್ನು ನಿವಾರಿಸಿ, ಸ್ಪಷ್ಟತೆ, ಸರಳತೆ ಮತ್ತು ಏಕರೂಪತೆಯನ್ನು ತರುವ ಅಗತ್ಯದಿಂದಲೇ ನಡೆದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ ದಾಸ್ ನಾಯಕ್ ಮಾಹಿತಿ ನೀಡಿದರು.
ಡಾ. ಅಲ್ಕಾ ಮಿತ್ತಲ್, ದಿವೇಶ್ ಕುಮಾರ್ ಮತ್ತು ಗೌತಮಿ ಭಂಡಾರಿ, ಪ್ರಶಾಂತ್ ಬಿ.ಕೆ. ಡಾ. ರಾಜೇಶ್ ಮಿಶ್ರಿಕೋಟಿ, ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ಟೌರೊ ಮತ್ತು ಕುಮಾರ್ ಬಿ.ಆರ್, ಸಂದೀಪ್ ಎಸ್.ಪಿ.
ಡಾ. ದೇವರಾಜ ಕೆ., ಎಂ. ಶೇಖರ್ ಪೂಜಾರಿ, ಶ್ರೀ ಪಿ.ಎ. ಜೋಸ್, ಡಾ. ಸೆಬಾಸ್ಟಿನ್ ಕೆ.ವಿ., ಡಾ. ಲಕ್ಷ್ಮೀಶ ರೈ ಹಾಗೂ ಶ್ರೀ ಚೇತನ್ ಮೆಂಡೋನ್ಸಾ ನಟರಾಜ ಹೆಗಡೆ, ಅಭಿನವ್ ಬನ್ಸಲ್, ಎಡ್ವರ್ಡ್ ಜೋಸೆಫ್ ಕೊಯೆಲೋ, ಡಾ. ರಮ್ಯಾ ಶೆಟ್ಟಿ, ಎನ್. ಅರುಣ್ ಪಡಿಯಾರ್, ಬಿ.ಎ. ಇಕ್ಬಾಲ್,IISDR ಸಂಸ್ಥೆ ಡಾ. ಸ್ಟೀವನ್ ಪಿಂಟೋ ಮತ್ತು ಅರುಂದತಿ ಹೆಗಡೆ ಉಪಸ್ಥಿತರಿದ್ದರು.


