24.5 C
Karnataka
Thursday, April 30, 2026

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾದ “ಜೈ” ಸಿನಿಮಾ

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ಸಿನಿಮಾ 17 ನೇ ಬೆಂಗಳೂರು ಅಂತಾರಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡ ಸೂಪರ್ ಹಿಟ್ ಚಿತ್ರಗಳ ಜತೆ ಪಾಪ್ಯುಲರ್ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಜೈ ತುಳು ಸಿನಿಮಾ ಆಯ್ಕೆಯಾಗಿದೆ.
ಜೈ ಸಿನಿಮಾ ಟಿವಿ, ಓಟಿಟಿ ಹಾಗೂ ಎಲ್ಲಾ ಭಾಷೆಯ ಡಬ್ಬಿಂಗ್ ಹಕ್ಕುಗಳನ್ನು ಭಾರತದ ಪ್ರಖ್ಯಾತ ಸಂಸ್ಥೆ ಬಹು ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಸಿನಿಮಾ 75 ದಿನಗಳನ್ನು ಪೂರೈಸಿದ್ದು ಶೀಘ್ರದಲ್ಲೇ ಸಿನಿಮಾ 100 ದಿನಗಳನ್ನು ಪೂರೈಸಲಿದೆ. ಸಿನಿಮಾದ 100 ದಿನಗಳ ಸಂಭ್ರಮಾಚರಣೆಯ ವೇಳೆ ಹೊಸ ಸಿನಿಮಾದ ಘೋಷಣೆಯನ್ನು ಮಾಡಲಾಗುವುದು ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
ಮುಂಬೈಯಲ್ಲಿ ಇತಿಹಾಸದಲ್ಲೇ ಅತೀ ದೊಡ್ಡ ತುಳು ಪ್ರೀಮಿಯರ್ ಒಂದೇ ದಿನ 9 ಟಾಕೀಸ್ ಗಳಲ್ಲಿ 25 ಕ್ಕೂ ಹೆಚ್ಚು ಶೋ ನಡೆದು ದಾಖಲೆ ಬರೆದಿದೆ.
ಜೈ ತುಳು ಸಿನಿಮಾ ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಪ್ರಥಮ ದಿನದಲ್ಲೇ 1020 ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ.
ಈಗಾಗಲೇ ಸಿನಿಮಾ ತೆರೆಕಂಡ ಎಲ್ಲಾ ಕಡೆ ಅದ್ಬುತ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಸಿನಿಮಾವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮನೆಮಂದಿ ಎಲ್ಲಾ ಇಷ್ಟ ಪಡುವುದರ ಜೊತೆಗೆ ಶಾಲಾ ಮಕ್ಕಳು ಕೂಡಾ ಸಿನಿಮಾ ನೋಡಿ ಮೆಚ್ಚಿದ್ದಾರೆ ಎಂದು ನಟ ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
“ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಜಿಲ್ಲೆಯ ಖ್ಯಾತನಾಮ ಕಲಾವಿದರು ಅಭಿನಯಿಸಿದ್ದಾರೆ.
ಗಿರಿಗಿಟ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಜೈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಕೂಡಾ ಪಾತ್ರ ನಿರ್ವಹಿಸಿದ್ದು ಅದು ಹೆಚ್ಚಿನ ಪರಿಣಾಮ ಬೀರಿದೆ.
ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣ ಆಗಿದೆ.
ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.
“‘ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಜ್ಯೋತಿಷ್ ಶೆಟ್ಟಿ, ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles