24.9 C
Karnataka
Thursday, April 30, 2026

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು: “ಫೆ.27ರಂದು ಬಿರ್ದ್ ದ ಕಂಬುಲ ಹಾಗೂ ವೀರಕಂಬಳ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ತುಳುನಾಡಿನ ಕಂಬಳ ಪ್ರೇಮಿಗಳು ಬಹಳಷ್ಟು ಬೆಂಬಲ ನೀಡಿದ್ದಾರೆ. ಸಿನಿಮಾಕ್ಕೆ ಕಂಬಳ ಕ್ಷೇತ್ರದ ಅನೇಕ ಸಾಧಕರು ಸಹಾಯ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ತುಳುನಾಡಿನ ಹೆಮ್ಮೆಯ ಕಂಬಳವನ್ನು ದೇಶ ವಿದೇಶಗಳಲ್ಲಿ ಪಸರಿಸಲು ಸಿನಿಮಾ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಗೆಲ್ಲಿಸಿ” ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಸಿನಿಮಾ ನಿರ್ದೇಶಕ ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾತಾಡಿ, “ನಾನು 50 ಸಿನಿಮಾಗಳನ್ನು ಎಲ್ಲ ಭಾಷೆಯಲ್ಲೂ ಮಾಡಿದ್ದೆ. ನನಗೆ ಒಮ್ಮೆ ಗುಣಪಾಲ ಕಡಂಬ ಅವರು ಪುತ್ತೂರು ಕಂಬಳಕ್ಕೆ ಕರೆದಿದ್ರು. ಈ ವೇಳೆ ಕಂಬಳ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡ್ಬೇಕು ಅಂತ ಯೋಚನೆ ಬಂತು. ಹೀಗಾಗಿ ಅರುಣ್ ರೈ ಅವರಲ್ಲಿ ಸಿನಿಮಾ ಬಗ್ಗೆ ಹೇಳಿದ್ದೆ. ಅಲ್ಲಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸಂಪರ್ಕಿಸಿ ಸಿನಿಮಾಕ್ಕೆ ಸಂಭಾಷಣೆ ಬರೆಯಲು ಹೇಳಿದೆವು. ಅಲ್ಲಿಂದ ಶುರುವಾದ ಈ ಸಿನಿಮಾ ಜರ್ನಿ ಈಗ ಬಿಡುಗಡೆಯ ಹಂತಕ್ಕೆ ಬಂದು ಮುಟ್ಟಿದೆ. ಸಿನಿಮಾದ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು ನಮ್ಮ ಧೈರ್ಯವನ್ನು ನೂರ್ಮಡಿಗೊಳಿಸಿದೆ. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ“ ಎಂದರು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಡುಗಳನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ಲೊಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ರಾಜೀವ ಶೆಟ್ಟಿ, ಗುಣಪಾಲ ಕಡಂಬ, ಕೆ.ಕೆ.ಪೇಜಾವರ, ಶಶಿರಾಜ್ ಕಾವೂರು, ಮೈಮ್ ರಾಮದಾಸ್ ರಶ್ಮಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು:
ತಾರಾಗಣ: ಆದಿತ್ಯ, ರಾಧಿಕಾ ಚೇತನ್, ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು, ಉಷಾ ಭಂಡಾರಿ, ವೀಣಾ ಪೊನ್ನಪ್ಪ, ಗೀತಾ ಸುರತ್ಕಲ್, ಸ್ವರಾಜ್ ಶೆಟ್ಟಿ, ದಿವ್ಯಾ, ಶ್ರೀನಿವಾಸ್ ಗೌಡ, ಸುರೇಶ್ ಶೆಟ್ಟಿ, ಚೇತನ್ ರೈ ಮಾಣಿ, ಯುವ ಶೆಟ್ಟಿ, ಮೈಮ್ ರಮೇಶ್, ಪ್ರಕಾಶ್ ರೈ, ರವಿಶಂಕರ್, ಶೋಭರಾಜ್, ಸಂತೋಷ್ ಶೆಟ್ಟಿ
ಬಾಬಾ ಬ್ಲೆಸ್ಸಿಂಗ್ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ಚಿತ್ರಕ್ಕೆ ಕಥೆ- ಚಿತ್ರಕಥೆ- ನಿರ್ದೇಶನ: ಡಾ. ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರದ್ದು.
ನಿರ್ಮಾಪಕರು: ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೋಡಾರ್,
ಕಾರ್ಯಕಾರಿ ನಿರ್ಮಾಪಕ: ರಾಜೇಶ್ ಕುಡ್ಲ, ಸಂಭಾಷಣೆ: ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಛಾಯಾಗ್ರಾಣ : ಆರ್ ಗಿರಿ, ಸಂಕಲನ : ಶ್ರೀನಿವಾಸ್ ಪಿ ಬಾಬು, ಕಲಾ ನಿರ್ದೇಶನ: ಚಂದ್ರಶೇಖರ್ ಸುವರ್ಣ ಮೂಲ್ಕಿ, ಸಹ ನಿರ್ದೇಶಕರು: ಬೆನಕ ಕೊಟ್ರೇಶ್, ಅಕ್ಷತ್ ವಿಟ್ಲ, ಆಡಿಯೋ ಕಂಪನಿ : ಲಹರಿ ಆಡಿಯೋ, ತುಳು ಸಾಹಿತ್ಯ : ವಿಜಯ್ ಕುಮಾರ್ ಕೊಡಿಯಲ್ ಬೈಲ್ , ಕೆ ಕೆ ಪೇಜಾವರ್, ಶಶಿರಾಜ್ ಕಾವೂರು , ನವೀನ್ ಎಡ್ಮೆಮಾರ್, ಕನ್ನಡ ಸಾಹಿತ್ಯ :ರಘು ಶಾಸ್ತ್ರಿ
ಅವರದ್ದಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles