24.5 C
Karnataka
Thursday, April 30, 2026

ಕೆವಿನ್ ಮಿಸ್ಕಿತ್ ಸಂಗೀತ ಕಾರ್ಯಕ್ರಮದ ಪೊಸ್ಟರ್ ಬಿಡುಗಡೆ

ಮ೦ಗಳೂರು: ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವ, ಮಾನಸಿಕ ಅಸ್ವಸ್ಥರಿಗೆ ಉಭಯಹಸ್ತ ನೀಡಿ ಅಶ್ರಯದಾತರಾಗಿ ಹೆಸರುವಾಸಿಯಾಗಿರುವ “ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ ಮಂಜೇಶ್ವರ” ಇವರ 17 ವರುಷಗಳ ಸೇವೆಯ ತನ್ನ ವಿವಿಧ ಕಾರ್ಯ ಯೋಜನೆಗಳ ಅನುಷ್ಟಾನಕ್ಕೆ ಸಹಾಯರ್ಥವಾಗಿ ಮಂಗಳೂರಿನ ಪ್ರಖ್ಯಾತ ಸಂಗೀತಗಾರ, ಯುವ ಪ್ರತಿಭೆಯಾಗಿರುವ ಕೆವಿನ್ ಮಿಸ್ಕಿತ್ ಇವರ 54ನೇ ಕೊಂಕಣಿ ಸಂಗೀತ ಸಂಜೆಯನ್ನು ಅಯೋಜಿಸಿದೆ.
ಜೂನ್ 21ನೇ ಭಾನುವಾರ ಸಂಜೆ 6 ಘಂಟೆಗೆ ಮಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಗುವುದು. ಈ ಪ್ರಯುಕ್ತ ಪ್ರಚಾರ ಘೊಷಣೆಯ ಪೊಸ್ಟರ್ ಬಿಡುಗಡೆ ಕಾರ್ಯಕ್ರಮ ಸ್ನೇಹಾಲಯ ಸಂಸ್ಥೆಯ ಮಂಗಳೂರಿನ ಪ್ರಧಾನ ಕಛೇರಿಯಲ್ಲಿ ನೆರವೇರಿಸಲಾಯಿತು.
ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರು ಆಗಿರುವ ಜೋಸೆಫ್ ಕ್ರಾಸ್ತಾ ಪೊಸ್ಟರ್ ಬಿಡುಗಡೆ ಮಾಡಿ ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಿದರು. ಸಭಾರಂಭದಲ್ಲಿ ಸ್ನೇಹಾಲಯದ ಹಲವು ಅಭಿಮಾನಿಗಳು, ಶೆಲ್ಡಾನ್ ಕ್ರಾಸ್ತ, ಸಂಸ್ಥೆಯ ಕಾರ್ಯದರ್ಶಿಗಳಾದ ಒಲಿವಿಯಾ ಕ್ರಾಸ್ತಾ, ಸಂಗೀತಗಾರ ಕೆವಿನ್ ಮಿಸ್ಕಿತ್, ಸಲಹೆಗಾರರಾದ ಜಿಯೋ ಡಿ ಸಿಲ್ವ, ಅಗ್ರಾರ್, ಜಾಕ್ಸನ್ ಕಿನ್ನಿಗೋಳಿ ಹಾಗು ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles