24.9 C
Karnataka
Thursday, April 30, 2026

ಮಾ.18 ರಿಂದ ವಿದ್ವತ್‌ ಕಾಲೇಜಿನಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ

ಬೆಳ್ತಂಗಡಿ: ಪರೀಕ್ಷೆಗಳಾದ KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವತಿಯಿಂದ ಮಾರ್ಚ್ 18 ರಿಂದ ವಿಶೇಷ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತಿದೆ.

ಈ ಕ್ರ್ಯಾಶ್ ಕೋರ್ಸ್‌ನಲ್ಲಿ ಪ್ರತಿಯೊಂದು ಅಧ್ಯಾಯವನ್ನು ತಜ್ಞ ಉಪನ್ಯಾಸಕರು ಬೋಧಿಸುವುದರ ಜೊತೆಗೆ ಅಧ್ಯಯನಕ್ಕೆ ಅಗತ್ಯವಾದ ರೆಫರೆನ್ಸ್ ಮಾಡ್ಯೂಲ್‌ಗಳು ಹಾಗೂ ತರಗತಿ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿದಿನ ಅಭ್ಯಾಸ ಪತ್ರಿಕೆಗಳೊಂದಿಗೆ ಅಧ್ಯಾಯವಾರು ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಮೊದಲ 20 ದಿನಗಳಲ್ಲಿ ಮೂರು ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ, ನಂತರ ಪ್ರತಿದಿನ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ತಯಾರಿಯನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ನಡೆಸುವುದು ಇದರ ಉದ್ದೇಶವಾಗಿದೆ.

ಕ್ರ್ಯಾಶ್ ಕೋರ್ಸ್ ತರಬೇತಿಯಲ್ಲಿ ಒಟ್ಟು 15 ಪ್ರಮುಖ ಪರೀಕ್ಷೆಗಳು, ಪರೀಕ್ಷೆಗೆ ಸಂಬಂಧಿಸಿದ ಶಾರ್ಟ್‌ಕಟ್ ವಿಧಾನಗಳು ಹಾಗೂ ತಜ್ಞರ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಜೊತೆಗೆ KCET ಕೃಷಿ ಕೋಟಾಗೆ ಸಂಬಂಧಿಸಿದ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುತ್ತದೆ.

ಕ್ರ್ಯಾಶ್ ಕೋರ್ಸ್ ಗೆ ಸೇರುವಲ್ಲಿ ಉತ್ಸುಕರಾಗಿದ್ದವರು ಹೆಚ್ಚಿನ ಮಾಹಿತಿಗಾಗಿ 7618718793, 7618718794, 7618718795 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ‌ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles