ಜ.11 : ಸುರತ್ಕಲ್ ನಲ್ಲಿ ವೀರಕೇಸರಿ ಟ್ರೋಫಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ
ಮ೦ಗಳೂರು: ವೀರ ಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ 2025 ಜನವರಿ 11 ಶನಿವಾರ ಸಂಜೆ 4 ಗಂಟೆಗೆ...
ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ : 6 ಮಂದಿ ವಶಕ್ಕೆ
ಬೆಳ್ತಂಗಡಿ:ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರನ್ನು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಮದ್ದಡ್ಕ ನಿವಾಸಿ ಇಸಾಕ್(56), ಶಿರ್ಲಾಲುನಿವಾಸಿ ಸಿದ್ದಿಕ್(34) ಅವರು ಹನ್ನೊಂದು ದಿನಗಳ ಹಿಂದೆ ವ್ಯವಹಾರ ಸಂಬಂಧ ತುಮಕೂರಿಗೆ...
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನುಬಜಪೆ ಪೊಲೀಸರು ಬ೦ಧಿಸಿದ್ದಾರೆ.ಮಂಗಳೂರು ತಾಲೂಕು ಮೊಗರು ಗ್ರಾಮ ನಿವಾಸಿ ಜಯಾನಂದ ಕುಲಾಲ್(48) ಬ೦ಧಿತ ಆರೋಪಿ.ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550 ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಬಜಪೆ ಪೊಲೀಸ್ ಠಾಣೆಯ PSI ಕುಮಾರೇಶನ್ ರವರುದಿನಾಂಕ 27-12-2023 ರಂದು ಸ೦ಜೆ 5-45 ಗಂಟೆಗೆ ರೌಂಡ್ಸ್ ಮಾಡುತ್ತಾ...
ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ 28 ಲಕ್ಷ ಮೌಲ್ಯದ ಗಾಂಜಾ ವಶ; ಇಬ್ಬರು ಆರೋಪಿಗಳ ಸೆರೆ
ಮಂಗಳೂರು : ಒರಿಸ್ಸಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಹೇಂದ್ರ ಬೊಲೆರೋ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ 120 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಜ.6 ರಂದು ಮಂಗಳೂರು ನಗರಕ್ಕೆ ಒರಿಸ್ಸಾ ರಾಜ್ಯದಿಂದ ಮಹೇಂದ್ರ ಬೊಲೆರೋ ವಾಹನದಲ್ಲಿ ಗಾಂಜಾವನ್ನು...
ಆಟೋ ರಿಕ್ಷಾದಲ್ಲಿ ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯ ಬ೦ಧನ
ಮಂಗಳೂರು: ಆಟೋ ರಿಕ್ಷಾದಲ್ಲಿಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಬಜಾಲ್ ನಂತೂರು ನಿವಾಸಿ ತೌಸೀಫ್ @ ತೌಚಿ ( 23 ) ಬ೦ಧಿತ ಆರೋಪಿ.
ಮಂಗಳೂರು ನಗರ ಪಳ್ನೀರು ನ ಎಸ್.ಎಲ್ ಮಥಾಯಿಸ್ ರಸ್ತೆಯ ಕೊಯಿಲೊ ಲೇನ್ ಬಳಿ ಆಟೋ ರಿಕ್ಷಾದಲ್ಲಿ ಒಬ್ಬ ವ್ಯಕ್ತಿ ಎ೦ಡಿಎ೦ಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು...
ವಾಹನಗಳ ಬ್ಯಾಟರಿ ಕಳ್ಳತನ ಆರೋಪಿಯ ಬ೦ಧನ: 3,90,000 ರೂ. ಮೌಲ್ಯದ ಸೊತ್ತು ವಶ
ಮಂಗಳೂರು: ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ಬ೦ಧಿಸಿ ಸೊತ್ತು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ತಲಪಾಡಿ ಬಳಿಯ ಕಜೆ ನಿವಾಸಿ ರಿಯಾಜ್ (30 ) ಬ೦ಧಿತ ಆರೋಪಿ.ಜ , 29 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳ ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು....
ಇಪ್ಪತ್ತೈದು ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ಆಯುಕ್ತ,ಬ್ರೋಕರ್
ಮಂಗಳೂರು:ಟಿ.ಡಿ.ಆರ್ ನೀಡಲು 25,00,000 ರೂ. (ಇಪ್ಪತ್ತೈದು ಲಕ್ಷ) ಲಂಚ ಬೇಡಿಕೆ ಇಟ್ಟಿದ್ದ ಮುಡಾ ಆಯುಕ್ತ ಮನ್ಸೂರ್ ಆಲಿ ಹಾಗೂ ಅವರ ಪರವಾಗಿ ಲಂಚದ ಹಣ ಸ್ವೀಕರಿಸುತ್ತಿದ್ದ ಬ್ರೋಕರ್ ಮಹಮ್ಮದ್ ಸಲಿಂ ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬ೦ಧಿಸಿದ್ದಾರೆ.
ಮಹಮ್ಮದ್ ಸಲಿಂ
ದೂರುದಾರರು ಮಂಗಳೂರು ತಾಲೂಕು ಕುಡುಪು ಗ್ರಾಮದಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು, ಮಂಗಳೂರು ಮಹಾನಗರ...
ಬೋಳಂತೂರು ದರೋಡೆ ಪ್ರಕರಣ :ಓವ೯ನ ಬಂಧನ, ಕಾರು, ನಗದು ವಶ
ಮ೦ಗಳೂರು: ವಿಟ್ಲ ಬೋಳಂತೂರಿನ ಉದ್ಯಮಿಯ ಮನೆಯಲ್ಲಿ, ಇ ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಪ್ರಕರಣದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಓವ೯ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಕೇರಳ ಕೊಲ್ಲಂ ಜಿಲ್ಲೆಯ ಅನಿಲ್ ಫರ್ನಾಂಡಿಸ್ ( 49 ವರ್ಷ) ಬ೦ಧಿತ ಆರೋಪಿಯಾಗಿದ್ದು ಆತನಿ೦ದ ಕಾರು, ನಗದು ವಶಪಡಿಸಿಕೊಳ್ಳಲಾಗಿದೆ.ಜ.3ರಂದು ರಾತ್ರಿ, ಬಂಟ್ವಾಳ ತಾಲೂಕು,...
ಮೋಸದಿಂದ ಹಣ ವರ್ಗಾವಣೆ: ದೂರು
ಮ೦ಗಳೂರು: ವ್ಯಕ್ತಿಯೋವ೯ರು ಜಾಗವನ್ನು ನೋಂದಣಿ ಮಾಡುವ ಬಗ್ಗೆ ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು ಮಾಡಿಕೊಂಡಿದ್ದು ಕಾರಣದಿಂದಾಗಿ ಆಧಾರ್ ಲಿಂಕ್ ನ್ನು ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಅವರ ಬ್ಯಾಂಕ್ ಖಾತೆಯಿ೦ದ ಹಂತ ಹಂತವಾಗಿ ಒಟ್ಟು 15,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರ ಮೊಬೈಲ್ ಗೆ...
ಖೋಟಾ ನೋಟು ಜಾಲ: ಇಬ್ಬರ ಬ೦ಧನ
ಬಂಟ್ವಾಳ : ಖೋಟಾ ನೋಟುಗಳ ವಿನಿಮಯ ಜಾಲವೊ೦ದನ್ನು ಪತ್ತೆಹಚ್ಚಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬ೦ಧಿಸಿದ್ದಾರೆ.ಮೇ 10 ರಂದು ರಾತ್ರಿ ಬಿ,ಸಿ.ರೋಡಿನ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೇರಳ ನೋ೦ದಣಿಯ ಕಾರನ್ನು ಪರಿಶೀಲಿಸಲು ಬಂಟ್ವಾಳ ನಗರ ಠಾಣೆಯ ಪಿ.ಎಸ್.ಐ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ತೆರಳಿದಾಗ, ಸದ್ರಿ ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ...