ಸ್ವರ ಸಂಕ್ರಾಂತಿ ಉತ್ಸವ-25 ಸ್ವರ ಸಾಧನಾ ಪ್ರಶಸ್ತಿ ವಿತರಣೆ
ಮಂಗಳೂರು: ಕಲಾ ಶಾಲೆ, ಸ್ವರಾಲಯ ಸಾಧನಾ ಫೌಂಡೇಷನ್ ವತಿಯಿಂದ ಸ್ವರ ಸಂಕ್ರಾಂತಿ ಉತ್ಸವ ಹಾಗೂ ಸ್ವರ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಗದ್ಗುರು ದುರುಧುಂದೇಶ್ವರ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಈಗಿನ ಆಧುನಿಕ ಸೌಲಭ್ಯ ಬಳಸಿ ಆಧ್ಯಾತ್ಮಿಕವಾಗಿ ಮುನ್ನಡೆಯಬಹುದು. ಇವೆಲ್ಲಾವುಗಳಿಗೆ ಸಂಗೀತವು ಮಹತ್ವದ ಮಾಧ್ಯಮವಾಗಿದೆ. ಕಲಾಸೇವೆಯ...
ನಾಳೆ “ಶಿಲ್ಪಾ ಗಣೇಶ್” ನಿರ್ಮಾಣದ “ಪ್ರೊಡಕ್ಷನ್ ನಂ 1” ತುಳು ಚಲನಚಿತ್ರದ ಮುಹೂರ್ತ
ಈ ಕಾರ್ಯಕ್ರಮದಲ್ಲಿ “ಗೋಲ್ಡನ್ ಸ್ಟಾರ್ ಗಣೇಶ್” ಪಾಲ್ಗೊಳ್ಳುತ್ತಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಡಾ.ಭರತ್ ಶೆಟ್ಟಿ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ ಮಾಜಿ ಸ೦ಸದ ನಳಿನ್ ಕುಮಾರ್ ಕಟೀಲ್, ಹರಿಕೃಷ್ಣ ಬಂಟ್ವಾಳ್, ಹಾಗೂ ಇನ್ನಿತರ ಗಣ್ಯರು ಹಾಗೂ ಚಲನಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.“ನಿತ್ಯ ಪ್ರಕಾಶ್ ಬಂಟ್ವಾಳ” ಮೊದಲ ಬಾರಿಗೆ...
“ಮಿಡ್ಲ್ ಕ್ಲಾಸ್ ಫ್ಯಾಮಿಲಿ'” ತುಳು ಚಿತ್ರದೊಂದಿಗೆ ಕೈಜೋಡಿಸಿದ ರೋಹನ್ ಮೊಂತೇರೊ
ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ.
ರೋಹನ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ರೋಹನ್ ಮೊಂತೇರೊ ಅವರು ಬೆಂಬಲ...
ಫೆ.21ಕ್ಕೆ ಬಹುನಿರೀಕ್ಷಿತ “ಮೀರಾ” ಚಲನಚಿತ್ರ ತೆರೆಗೆ
ಮಂಗಳೂರು: ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ'ಮೀರಾ' ಚಲನಚಿತ್ರ ಫೆಬ್ರವರಿ 21ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ, ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ, ಇದು ತುಳು...
ಜ.17ರಂದು “ಕಣ್ಣಾಮುಚ್ಚೆ ಕಾಡೇ ಗೂಡೇ“ ಸಿನಿಮಾ ತೆರೆಗೆ
ಮಂಗಳೂರು: ಡಾರ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತಯಾರಾಗಿರುವ “ಕಣ್ಣಾಮುಚ್ಚೆ ಕಾಡೇ ಗೂಡೇ“ ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವೀರೇಶ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.”ಸಿನಿಮಾದಲ್ಲಿ ಸಸ್ಪೆನ್ಸ್ ಕಥಾ ಹಂದರದ ಜೊತೆಗೆ ತಾಯಿಯ ಸೆಂಟಿಮೆಂಟ್ ಇದೆ. ನವಿರಾದ ಪ್ರೇಮಕತೆ, ಸುಂದರವಾದ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸಿನಿಮಾ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತದೆ. ನಾನು ಸಿನಿಮಾದಲ್ಲಿ...
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ : ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ...
ಜನಮನಗೆದ್ದ `ಅಲನಿ ಮೆಲೊಡಿ ನೈಟ್’
ಮ೦ಗಳೂರು: ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277ನೇ ಹಾಗೂ 24 ನೇ ವರ್ಷದ ಮೊದಲ ಕಾರ್ಯಕ್ರಮ ಜನವರಿ 5 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಬಯಲು ರಂಗ ಮಂದಿರವು ಪ್ರೇಕ್ಷಕರಿಂದ ತುಂಬಿ ತುಳುಕಿದ್ದು, ಒಂಬತ್ತರ ಹರಯದ ಬಾಲೆ ಅಲನಿ ಡಿಸೋಜ ಈ ಸಂಗೀತ ರಸಮಂಜರಿಯಲ್ಲಿ ಒಂಬತ್ತು ಹಾಡುಗಳನ್ನು ಹಾಡಿ ಮನ ರಂಜಿಸಿದಳು.
ಕಾರ್ಯಕ್ರಮದಲ್ಲಿ ಮೊದಲಿಗೆ...
ಮುಂದಿನ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವ – ಜಿಲ್ಲಾಧಿಕಾರಿ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆರಂಭಗೊಂಡಿರುವ ಚಲನಚಿತ್ರೋತ್ಸವವನ್ನು ಮುಂದಿನ ವರ್ಷದಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಗಿ ನಡೆಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ಅವರು ಗುರುವಾರ ನಗರದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ನಡೆದ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಕರಾವಳಿ ಉತ್ಸವದಲ್ಲಿ ಚಲನಚಿತ್ರೋತ್ಸವವನ್ನು ನಡೆಸಲಾಗಿದೆ. ಇದನ್ನು ಇನ್ನಷ್ಟು...
ʻಪಯಣ್ʼಕೊಂಕಣಿ ಚಲನಚಿತ್ರದ ಶತದಿನೋತ್ಸವ ಸಂಭ್ರಮಾಚರಣೆ
ಮ೦ಗಳೂರು:ಇಡೀ ವಿಶ್ವಾಧ್ಯಂತ ಚಲನ ಚಿತ್ರೋಧ್ಯಮವು ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರವೊಂದು ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಸೀಮಿತ ಮಾರುಕಟ್ಟೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ. ಕೊಂಕಣಿಯಲ್ಲಿ ಚಲನಚಿತ್ರಗಳನ್ನು ತಯಾರಿಸುವುದು ಯಾವುದೇ ಲಾಭದ ನಿರೀಕ್ಷೆಯಿಂದಲ್ಲ, ವಿನಃ ಮಾತೃಭಾಷೆಯ ಮೇಲಿನ ಪ್ರೇಮದಿಂದ. ʻಪಯಣ್ʼ ಕೊಂಕಣಿಯಲ್ಲಿ ಇದುವರೆಗೆ ಬಂದಂತಹ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದ್ದು,...
ಮಂಗಳೂರು : ಜನವರಿ 11 ಮತ್ತು 12 ರಂದು ಕದ್ರಿಪಾರ್ಕಿನಲ್ಲಿ ಕಲಾ ಪರ್ಬ
ಮಂಗಳೂರು : ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿಪಾರ್ಕ್ ನಲ್ಲಿ ' ಕಲಾ ಪರ್ಬ ' ಎಂಬ ಚಿತ್ರ, ನೃತ್ಯ, ಶಿಲ್ಪ ಮೇಳವನ್ನು ಶರಧಿ ಪ್ರತಿಷ್ಟಾನವು ' ಅಸ್ತ್ರ ' ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕರಾವಳಿ ಉತ್ಸವದ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಕಲಾ ಮೇಳದಲ್ಲಿ ಸುಮಾರು 150 ಕಲಾ ಮಳಿಗೆಗಳಲ್ಲಿ ಕಲಾವಿದರು ತಮ್ಮ...










