21.8 C
Karnataka
Sunday, September 13, 2026
Home ಕರಾವಳಿ

ಕರಾವಳಿ

ಆಯುರ್ವೇದದಿಂದ ಉತ್ತಮ ಆರೋಗ್ಯ: ಮೇಯರ್ ಸುದೀರ್ ಶೆಟ್ಟಿ

0
ಮಂಗಳೂರು:ಪುರಾತನ ಕಾಲದಲ್ಲಿ ಪ್ರತಿಯೊಂದು ಕಾಯಿಲೆಗೆ ಆಯುರ್ವೇದ ಔಷಧಿಯೇ ಮುಖ್ಯವಾಗಿತ್ತು ಪಂಡಿತರು ಕಷಾಯ,ಎಣ್ಣೆ, ಲೇಪನಗಳ ಮೂಲಕ ಔಷಧಗಳನ್ನು ನೀಡುತ್ತಿದ್ದರು. ಭಾರತದಲ್ಲಿ ಆಯುರ್ವೇದ ಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಹೇಳಿದರು.ಅವರು ಶುಕ್ರವಾರ ನಗರದ ವೆನ್ ಲಾಕ್ ಆಯುಷ್ ಆಸ್ಪತ್ರೆಯಲ್ಲಿ ನಡೆದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಆಯುರ್ವೇದವನ್ನು...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಪನ್ ಆಕ್ಸೆಸ್ ಫ್ಯೂಯಲ್ ಫಾರ್ಮ್ ಕಾರ್ಯಾರಂಭ

0
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಪನ್ ಆಕ್ಸೆಸ್ ಫ್ಯೂಯಲ್ ಫಾರ್ಮ್ಮತ್ತು ವಿಮಾನ ಇಂಧನ ತುಂಬುವ ಸೌಲಭ್ಯವನ್ನು ಡಿಸೆಂಬರ್ 16ರಂದು ಆರಂಭಿಸಲಾಯಿತು. ಈ ಸೌಲಭ್ಯವು ವಿಮಾನ ನಿಲ್ದಾಣವುರಚಿಸಿದ ಹೊಸ ಗ್ರೀನ್ಫೀಲ್ಡ್ ಇಂಧನ ಸಂಗ್ರಹಣೆಯನ್ನು ಒಳಗೊಂಡಿದೆ, ಜೊತೆಗೆ ವಿಮಾನ ನಿಲ್ದಾಣದಲ್ಲಿ ತೈಲ ಮಾರುಕಟ್ಟೆ ಕಂಪನಿಯ(ಒಎಂಸಿ) ಅಸ್ತಿತ್ವದಲ್ಲಿರುವ ಬ್ರೌನ್ಫೀಲ್ಡ್ ಆಸ್ತಿಯನ್ನು ಒಳಗೊಂಡಿದೆ. ಬಜ್ಪೆಯ ಹಳೆಯ ಟರ್ಮಿನಲ್ ಕಟ್ಟಡದ...

ತಾಯಿ- ಶಿಶು ಮರಣ ಪ್ರಮಾಣ ತಗ್ಗಿಸಿ- ಜಿಲ್ಲಾಧಿಕಾರಿ ಸೂಚನೆ

0
ಮಂಗಳೂರು: ಜಿಲ್ಲೆಯಲ್ಲಿ ಪ್ರಸವ ಹಾಗೂ ನಂತರದಲ್ಲಿ ಆರೋಗ್ಯ ಏರುಪೇರಿನಿಂದ ತಾಯಿ ಮತ್ತು ಮಗು ಸಾವಿಗೀಡಾಗುವ ಪ್ರಮಾಣವನ್ನು ತಗ್ಗಿಸಲು ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಸೂಚಿಸಿದ್ದಾರೆ.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮತ್ತು ಶಿಶು ಮರಣ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು....

ಮಹಿಳೆಯರು ನೀರು ಸ೦ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್

0
ಮಂಗಳೂರು:ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ...

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನದ ಆಚರಣೆ

0
ಮಂಗಳೂರು:ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಉದಾತ್ತ ದೃಷ್ಟಿಕೋನವನ್ನು ಇಟ್ಟುಕೊಂಡು ಶೈಕ್ಷಣಿಕವಾಗಿ ಗಟ್ಟಿತನ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರೋಮಾಂಚಕ ಕಲಿಕಾ ಅನುಭವ ಗಳನ್ನು ನೀಡುತ್ತಾ ಬಂದಿದೆ. 1891ರಲ್ಲಿ ಶ್ರೇಷ್ಠ ಮಾನವತವಾದಿ ಹಾಗೂ ಸಂಸ್ಥೆಯ ಪ್ರವರ್ತಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯಿಂದ ಕೆನರಾ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಕೆನರಾ ಬ್ಯಾಂಕ್ ಮತ್ತು...

ಮೀಸಲಾತಿ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕಿರುವ ಉಪಕ್ರಮ: ಡಾ. ರವೀಂದ್ರನಾಥ ರಾವ್‌

0
ಮಂಗಳೂರು: ಭಾರತದಲ್ಲಿರುವ ಬಹುತೇಕ ಹಿಂದುಳಿದ ವರ್ಗಗಳಲ್ಲಿ ಬಡತನ, ಶಿಕ್ಷಣದ ಕೊರತೆ, ಸಾಮಾಜಿಕ ಬಹಿಷ್ಕಾರ ಮೊದಲಾದ ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಮೀಸಲಾತಿ ಹಿಂದುಳಿದ ಜಾತಿ ಮತ್ತು ವರ್ಗಗಳಿಗೆ ಸಾಮಾಜಿಕ ನ್ಯಾಯ ತರಲು ಇರುವ ಪ್ರಮುಖ ಉಪಕ್ರಮವಾಗಿದೆ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವೈ. ರವೀಂದ್ರನಾಥ ರಾವ್ ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯ, ಸಮಾಜಶಾಸ್ತ್ರ ಸ್ನಾತಕೋತ್ತರ...

ಸ್ಥಿತ್ಯಂತರದಲ್ಲಿ ಬಂಟರು, ಶಿಕ್ಷಣ ಮತ್ತು ನಿರುದ್ಯೋಗ” ವಿಚಾರ ಸಂಕಿರಣ

0
ಉಡುಪಿ: ವಿಶ್ವ ಬಂಟ ಸಮ್ಮೇಳನದ ಹಿನ್ನೆಲೆಯಲ್ಲಿ "ಸ್ಥಿತ್ಯಂತರದಲ್ಲಿ ಬಂಟರು, ಶಿಕ್ಷಣ ಮತ್ತು ನಿರುದ್ಯೋಗ" ಕುರಿತ ವಿಚಾರ ಸಂಕಿರಣವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಿತು.ಹೇರಂಬ ಇಂಡಸ್ಟ್ರೀಸ್ ಲಿ. ಮುಂಬೈ ಇದರ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು.ಅಧ್ಯಕ್ಷತೆಯನ್ನು ವಿಶ್ವಾತ್ ಕೆಮಿಕಲ್ಸ್ ಲಿ, ಮುಂಬೈ ಇದರ ಸಿಎಂಡಿ ಬಿ.ವಿವೇಕ ಶೆಟ್ಟಿ, ಜಾಗತಿಕ ಬಂಟರ...

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು: ವಿದ್ಯಾರ್ಥಿ ಸಂಘದ ಚುನಾವಣೆ

0
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಗುರುವಾರ ನಡೆಯಿತು. ಒಟ್ಟು 34 ಸ್ಥಾನಗಳ ಪೈಕಿ 2೫ ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾದರು. ಉಳಿದ ೯ ಸ್ಥಾನಗಳಿಗಷ್ಟೇ ಚುನಾವಣೆ ನಡೆಸಲಾಯಿತು.ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿಕಾಂನ ಜೀವಿತ್ ಗಟ್ಟಿ, ಕಾರ್ಯದರ್ಶಿಯಾಗಿ ತೃತೀಯ ಬಿಕಾಂನ ಶಿವಪ್ರಸಾದ್ ರೈ ಟಿ.,...

ನ.24 : ಎಮ್ಮೆಕೆರೆ ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣ ಉದ್ಘಾಟನೆ

0
ಮಂಗಳೂರು : ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್‌ಸಿಟಿ ಅನುದಾನದೊಂದಿಗೆ ನಿರ್ಮಿಸಿರುವ ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣವನ್ನು ನ.24 ರಂದು ಮುಖಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣದ ಬಗ್ಗೆ ನ.13 ರಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಸುಮಾರು ಸುಮಾರು 22 ಕೋ.ರೂ. ವೆಚ್ಚದಲ್ಲಿ ಅಂತಾರಾಷ್ಟೀಯ ಗುಣಮಟ್ಟದ ಈಜುಕೊಳವನ್ನು ನಿರ್ಮಿಸಲಾಗಿದೆ. 2...

ಸಹಕಾರ ಸಂಘಗಳ ಹಾಗೂ ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರ ಜಿಲ್ಲಾ ಮಟ್ಟದ ಕ್ರೀಡಾಕೂಟ

0
ಮ೦ಗಳೂರು:ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸದಸ್ಯರುಗಳನ್ನು, ಸಿಬ್ಬಂದಿ ವರ್ಗವನ್ನು ಹಾಗೂ ನವೋದಯ ಸ್ವ- ಸಹಾಯ ಸಂಘಗಳ ಸದಸ್ಯರುಗಳನ್ನು, ಪ್ರೇರಕರನ್ನು ಮತ್ತು ಬ್ಯಾಂಕಿನ ಸಿಬ್ಬಂದಿಗಳನ್ನು ಒಂದೇ ಕಡೆ ಒಗ್ಗೂಡಿಸುವ ಉದ್ದೇಶವನ್ನಿಟ್ಟುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ (ರಿ.),ಮಂಗಳೂರು ಸಹಭಾಗಿತ್ವದಲ್ಲಿ ‘‘ಜಿಲ್ಲಾ ಮಟ್ಟದ ಕ್ರೀಡಾಕೂಟ’’ವನ್ನುನ.30ನೇ...