ಎ೦.ಸಿ.ಸಿ. ಬ್ಯಾಂಕ್ : 13.12 ಕೋ. ರೂ. ಲಾಭ, ಕರ್ನಾಟಕ ರಾಜ್ಯಕ್ಕೆ ಕಾರ್ಯ ಕ್ಷೇತ್ರ ವಿಸ್ತರಣೆ
ಮ೦ಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿ೦ಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎ೦.ಸಿ.ಸಿ. ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು,...
ಎಸ್‌ಸಿಡಿಸಿಸಿ ಬ್ಯಾಂಕ್ : 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ಲಾಭ
ಮ೦ಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ವರದಿ ವರ್ಷದಲ್ಲಿ ಅಮೋಘ ಸಾಧನೆಗೈದು, ದಿನಾಂಕ 31-03-2024ಕ್ಕೆ ಅಂತ್ಯವಾದ ಆರ್ಥಿಕವರ್ಷದಲ್ಲಿ ರೂ.79.09 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ.61.29 ಕೋಟಿ) ಕ್ಕಿಂತ ಶೇ. 29.04 ಏರಿಕೆಯಾಗಿದ್ದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎ೦ದುಬ್ಯಾಂಕಿನ ಅಧ್ಯಕ್ಷರಾದ ಡಾ...
ಮಂಗಳೂರಿನಿಂದ ಜೆಡ್ಡಾಗೆ ಸಾಪ್ತಾಹಿಕ ವಿಮಾನ ಸ೦ಚಾರ
ಮಂಗಳೂರು,: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಹಭಾಗಿತ್ವದಲ್ಲಿಸೌದಿ ಅರೇಬಿಯಾದ ಮೆಕ್ಕಾ ಪ್ರಾಂತ್ಯದ ಬಂದರು ನಗರ ಜೆಡ್ಡಾಗೆ ಸಂಪರ್ಕ ಕಲ್ಪಿಸಿದೆ. ಜೆಡ್ಡಾ ಮಂಗಳೂರು ಅಂತರರಾಷ್ಟ್ರೀಯವಿಮಾನ ನಿಲ್ದಾಣದಿಂದ ಸೇವೆ ಸಲ್ಲಿಸುವ ಎಂಟನೇ ಅಂತರರಾಷ್ಟ್ರೀಯ ತಾಣವಾಗಿದೆ. ಮಂಗಳೂರಿನಿಂದ ಜೆಡ್ಡಾಗೆ ಸಾಪ್ತಾಹಿಕ ವಿಮಾನಐಎಕ್ಸ್ 797 ನ ಉದ್ಘಾಟನಾ ಹಂತವು ತಿರುಚಿರಾಪಳ್ಳಿಯಿಂದ ಐಎಕ್ಸ್ 1499 ಆಗಿ ಹಾರಾಟ...
ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ; ಆರೋಗ್ಯ ಸ್ಥಿರ
ಮಂಗಳೂರು : ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕಾರಣಗಳ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏ. 2ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಜರುಗಿದೆ. ಕೂಡಲೇ ಅವರನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನಿಸಿದವರು. ನಗರದ ಜಿಲ್ಲಾ ಚುನಾವಣಾಧಿಕಾರಿಗಳ...
ಕ್ಯಾ. ಗಣೇಶ್ ಕಾರ್ಣಿಕ್ ಅವರಿಗೆ ಮಾತೃ ವಿಯೋಗ
ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಮಾತೃಶ್ರೀಯವರಾದ ಶ್ರೀಮತಿ ಅಂಬಾ ಸಾವಿತ್ರಿ ಅವರು ಮಂಗಳವಾರ ಬೆಳಗ್ಗೆ 9:45ರ ವೇಳೆಗೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 96 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಸ್ವಲ್ಪ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಹತ್ತು ಮಂದಿ ಮಕ್ಕಳ ತುಂಬು ಸಂಸಾರವನ್ನು ಮುನ್ನಡೆಸಿದ ಅವರಿಗೆ...
ಏ.3ರಂದು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ .ಬೆಳಗ್ಗೆ 9.30ಕ್ಕೆ ಕುದ್ರೋಳಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭ ಭಾಗವಹಿಸುವರು.
12,844 ಲೀಟರ್ ಮದ್ಯ ವಶಕ್ಕೆ
ಮಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 1ರವರೆಗೆ ಜಿಲ್ಲೆಯಲ್ಲಿ 41,90,665 ರೂಪಾಯಿ ಮೌಲ್ಯದ 12,844 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 243 ಎಫ್ ಐ ಆರ್ ಪ್ರಕರಣ ದಾಖಲಾಗಿದೆ...
ಮನೋಜ್ ಕುಮಾರ್ ವೇಣೂರುಗೆ ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯ 26 ನೇ ಮನೆ ಹಸ್ತಾಂತರ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ ಯೋಜನೆ "ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯಲ್ಲಿ 26ನೇ ಮನೆಯ ಹಸ್ತಾಂತರ ಫಲಾನುಭವಿಯಾದ ಪರಿಶಿಷ್ಟ ವರ್ಗಕ್ಕೆ ಸೇರಿದ ವಿಶಿಷ್ಟ ಚೇತನ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಇವರಿಗೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಟ್ರಸ್ಟಿನ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಸಮಕ್ಷದಲ್ಲಿ ನೆರವೇರಿತು.ಈ...
ಕಲ್ಲಿಕೋಟೆ: ಬಿಜೆಪಿ ನಾಯಕರಿ೦ದ ಮಾಜಿ ಮೇಯರ್ ಸಿ.ಜೆ ರೋಬಿನ್ ಭೇಟಿ
ಮ೦ಗಳೂರು: ಬಿಜೆಪಿ ಕೇರಳ ಚುನಾವಣಾ ಪ್ರಭಾರಿ ಹಾಗೂ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ಕೇರಳ ಚುನಾವಣಾ ಸಹ ಪ್ರಭಾರಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ರವಿವಾರ ಕ್ಯಾಲಿಕಟ್ ನ ಮಾಜಿ ಮೇಯರ್ ಸಿ.ಜೆ ರೋಬಿನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.ಈ...
ದ್ವಿಚಕ್ರ ವಾಹನ ಡಿಕ್ಕಿ; ಪಾದಚಾರಿ ಸಾವು
ಬೆಳ್ತಂಗಡಿ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಶೇಖರ ಬಂಗೇರ ಎ೦ಬವರು ಮೃತಪಟ್ಟ ಘಟನೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಬೆಳ್ತಂಗಡಿ ಸಂತೆಕಟ್ಟೆ ಬಸ್ಸು ನಿಲ್ದಾಣದ ಬಳಿ, ದ್ವಿಚಕ್ರ ವಾಹನದಲ್ಲಿ ಅದರ ಸವಾರ ಮಿಥುನ್ ಎಂಬವರು ಅನುಷಾ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಶೇಖರ ಬಂಗೇರ ಎಂಬವರಿಗೆ ಡಿಕ್ಕಿ ಹೊಡೆದಿದೆ....





