ಶ್ರೀನಿವಾಸ ವಿಶ್ವವಿದ್ಯಾಲಯ: ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾ ಮೆರವಣಿಗೆ
ಮ೦ಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಎ. ಶಾಮ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ ಸಮೂಹಸಂಸ್ಥೆಗಳ ಸಹಯೋಗದಲ್ಲಿ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಪ್ರಶಾಂತ ಶ್ರೀನಿವಾಸ ಕ್ಯಾಂಪಸ್‌ನಲ್ಲಿರುವ ವೈಕುಂಠದಲ್ಲಿ ಭವ್ಯವಾದ ಆಧ್ಯಾತ್ಮಿಕ ಕೂಟ ನಡೆಯಿತು. ಕಾರ್ಯಕ್ರಮವು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಸಾಕ್ಷಿಯಾಯಿತು. ನವಗ್ರಹ ಶಾಂತಿ ಹೋಮ, ಚಕ್ರಾಬ್ಜ ಮಂಡಲಪೂಜೆ, ಲಕ್ಷ್ಮೀ ನಾರಾಯಣ ಹೋಮ, ವಾಯುಸ್ತುತಿ...
ಫೆ. 24ರಂದು ಫಾತಿಮಾ ರಲಿಯಾ ಅವರ ಕವನ ಸಂಕಲನ ಬಿಡುಗಡೆ
ಮ೦ಗಳೂರು: ಫಾತಿಮಾ ರಲಿಯಾ ಅವರ ಕವನ ಸಂಕಲನ 'ಅವಳ ಕಾಲು ಸೋಲದಿರಲಿ' ಶನಿವಾರ ಸಂಜೆ ಮೂರು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಧಾ ಆಡುಕಳ ಮಾತಾಡಲಿದ್ದಾರೆ. ವಿಲ್ಸನ್ ಕಟೀಲ್ ಮತ್ತು ಮುಆದ್ ಜಿ.ಎಂ ಮುಖ್ಯ...
ಸಾಂಸ್ಕೃತಿಕ ಪಟ್ಟಿಗೆ ಜಾದೂ ಕಲೆ ಸೇರ್ಪಡೆಯಾಗಲಿ: ಕುದ್ರೋಳಿ ಗಣೇಶ್ ಮನವಿ
ಮಂಗಳೂರು : ಮನರಂಜನೆ ಜತೆಗೆ ವಿಸ್ಮಯ ಮೂಡಿಸುವ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ಕೇಂದ್ರದ ನಾಟಕ ಅಕಾಡೆಮಿ ಪಟ್ಟಿಯಲ್ಲಿ ಜಾದೂವಿಗೆ ಸ್ಥಾನ ನೀಡಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಜಾದೂ ಸೇರ್ಪಡೆಯಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂದು ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ವಿನಂತಿಸಿದ್ದಾರೆ.ನಗರದ...
ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್ ಪ್ರೆಸ್ ಮಂಗಳೂರುವರೆಗೆ ವಿಸ್ತರಣೆ
ಮ೦ಗಳೂರು: ತಿರುವನಂತರಪುರ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಮಂಗಳೂರಿನವರೆಗೆ ವಿಸ್ತರಣೆ ಮಾಡಲಾಗಿದೆ.ರೈಲ್ವೆ ಮಂಡಳಿ ಬುಧವಾರ ಹೊರಡಿಸಿರುವ ಆದೇಶದ ಪ್ರಕಾರ ವಂದೇ ಭಾರತ್ ರೈಲ್ ನಂ. 20632/20631 ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ...
ವೀರರಾಣಿ ಅಬ್ಬಕ್ಕ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಉಳ್ಳಾಲ : ಫೆಬ್ರವರಿ 24ರ೦ದು ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿರುವ 2023-24ರ ವೀರರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಾಜಿಶಾಸಕರು ಹಾಗೂ ಸಮಿತಿಯ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿಯವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಊರಿನ ಸಂಘಸಂಸ್ಥೆ, ಮಹಿಳಾ ಒಕ್ಕೂಟ ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಉಳ್ಳಾಲದ...
ಮಾವಿನ ಕಾಯಿ ಕೊಯ್ಯುತ್ತಿರುವಾಗ ಮರದಿ೦ದ ಬಿದ್ದು ಸಾವು
ಉಪ್ಪಿನಂಗಡಿ : ಮರಕ್ಕೆ ಹತ್ತಿ ಮಾವಿನ ಕಾಯಿ ಕೊಯ್ಯುತ್ತಿರುವ ಸಮಯ ಹಿಡಿತ ತಪ್ಪಿ ಕೆಳಗೆ ಬಿದ್ದು ರಮೇಶ ಎ೦ಬವರು ಮೃತಪಟ್ಟ ಘಟನೆ ನೆಲ್ಯಾಡಿಯಲ್ಲಿ ಸ೦ಭವಿಸಿದೆ. ರಮೇಶ್ ಅವರಲ್ಲಿ 10 ವರ್ಷದ ಮಗಳು ಮಾವಿನ ಕಾಯಿಯನ್ನು ಕೊಯಿದು ಕೊಡುವಂತೆ ಕೋರಿದ್ದಳು. ಅದರ೦ತೆ ರಮೇಶ್ ಪಕ್ಕದಲ್ಲಿದ್ದ ಮಾವಿನ ಮರಕ್ಕೆ ಹತ್ತಿ ಮಾವಿನ ಕಾಯಿಯನ್ನು ದೊಂಟಿಯ ಸಹಾಯದಿಂದ ಬಡಿದು...
ಕತಾರ್ ನಲ್ಲಿ ಬ್ಯಾರಿ ಸಂಸ್ಕೃತಿಯ ಅನಾವರಣಕ್ಕೆ ಕ್ರಮ:ಅನಿವಾಸಿ ಉದ್ಯಮಿ ಅಬ್ದುಲ್ಲ ಮೋನು
ಕತಾರ್ : ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ದೋಹಾ ಕತಾರ್ ವತಿಯಿಂದ ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರೂ, ಬಂಟ್ವಾಳ ಜಮೀಯ್ಯತುಲ್ ಫಲಾಹ್ ನ ಅಧ್ಯಕ್ಷರಾಗಿರುವ ರಶೀದ್ ವಿಟ್ಲ ಅವರನ್ನು ಅನಿವಾಸಿ ಉದ್ಯಮಿ ಅಬ್ದುಲ್ಲ ಮೋನು ಅವರು ಕತಾರ್ ನ ಅಝೀಝಿಯಾ ನಿವಾಸದಲ್ಲಿ ಸೋಮವಾರ ಸನ್ಮಾನಿಸಿದರು.
1992 ರಲ್ಲಿ ಕತಾರ್ ನಲ್ಲಿ ಪ್ರಾರಂಭಿಸಲಾದ...
ಹಾಸ್ಟೆಲ್‍ಗಳಲ್ಲಿ ಗುಣಮಟ್ಟದ ಸೌಲಭ್ಯ: 3 ದಿನಗಳೊಳಗೆ ಅಫಿಧಾವಿತ್ ಸಲ್ಲಿಸಲು ಡಿಸಿ ಸೂಚನೆ
ಮಂಗಳೂರು: ಇತ್ತೀಚೆಗೆ ಜಿಲ್ಲೆಯ ಕೆಲವೊಂದು ಖಾಸಗಿ ನರ್ಸಿಂಗ್ ಕಾಲೇಜುಗಳ ಹಾಸ್ಟೆಲ್‍ಗಳಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬರುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಮತ್ತು ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯವನ್ನು ಒದಗಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.ಈ ಬಗ್ಗೆ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್, ಅಲೈಡ್ ಹೆಲ್ತ್ ಸಯನ್ಸ್, ಇಂಜನಿಯರಿಂಗ್ ಕಾಲೇಜುಗಳಿಗೆ ಹಾಗೂ ಪದವಿಪೂರ್ವ...
ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಎಚ್ಚರಿಕೆ
ಮಂಗಳೂರು: ಬೇಸಿಗೆ ಆರಂಭವಾಗುತ್ತಿದ್ದು, ಸಾರ್ವಜನಿಕರಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಿಯುವ ನೀರಿನ ಲಭ್ಯತೆ ಹಾಗೂ ಸಮಸ್ಯಾತ್ಮಕ ಏರಿಯಾಗಳು...
ಎನ್‌ಐಟಿಕೆ ಸುರತ್ಕಲ್:ಮೂರು ಮೆಗಾ ಹಾಸ್ಟೆಲ್ ಗಳ ಉದ್ಘಾಟನೆ
ಸುರತ್ಕಲ್: ಎನ್‌ಐಟಿಕೆ ಸುರತ್ಕಲ್ ಇದರ ಮೂರು ಮೆಗಾ ಹಾಸ್ಟೆಲ್ ಗಳು ಮ೦ಗಳವಾರ ಉದ್ಘಾಟನೆಗೊ೦ಡಿತು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಲಕರ ಹಾಸ್ಟೆಲ್ ಗಳಾದ ಬ್ರಹ್ಮಗಿರಿ , ಶಿವಾಲಿಕ್ ಮತ್ತು ಬಾಲಕಿಯರ ಹಾಸ್ಟೆಲ್ -ಗೋದಾವರಿಯನ್ನು ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಯನ್ನು 130 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಾರ್ಯಕ್ರಮವು...








