ಸಿಸ್ಟರ್ ಹೆಲೆನ್ ಅವರಿಗೆ ಸನ್ಮಾನ
ಮ೦ಗಳೂರು: ಸ್ಪ೦ದನಾ ಟ್ರಸ್ಟಿನ ಆಡಳಿತಾಧಿಕಾರಿ ಸಿಸ್ಟರ್ ಹೆಲೆನ್ ರವರನ್ನು ಅವರ ಧಾರ್ಮಿಕ ಜೀವನದ ಸುವರ್ಣ ಮಹೋತ್ಸವದ ಪ್ರಯುಕ್ತ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಸ್ತೆ ಅಗಲೀಕರಣ ಮತ್ತು ಚರಂಡಿ ಅಭಿವೃದ್ಧಿ: ಬಗೆಹರಿದ ಸಮಸ್ಯೆ
ಮ೦ಗಳೂರು: ನಗರದ ಶ್ರೀನಿವಾಸ್ ಹೋಟೆಲ್ ನಿಂದ ವಿಮಲೇಶ್ ಬಿಲ್ಡಿಂಗ್ ವರೆಗಿನ ರಸ್ತೆ ಅಗಲೀಕರಣ ಮತ್ತು ಚರಂಡಿ ಅಭಿವೃದ್ಧಿ ವಿಷಯದಲ್ಲಿ ಉಂಟಾಗಿದ್ದ ಅನೇಕ ವರ್ಷಗಳ ಸಮಸ್ಯೆ ಕೊನೆಗೂ ಬಗೆಹರಿದಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಮುತುವರ್ಜಿ ಹಾಗೂ ನೇತೃತ್ವಕ್ಕೆ ಮನ್ನಣೆ ದೊರೆತಿದೆ.
ನಗರದ ಸೆಂಟ್ರಲ್ ವಾರ್ಡಿನ ಜಿ.ಎಚ್.ಎಸ್ ರಸ್ತೆಯ ಭಾಗದಲ್ಲಿರುವ ಆಶೀರ್ವಾದ್ ಬಿಲ್ಡಿಂಗ್ ಮಾಲೀಕರು ಈವರೆಗೆ...
ಸ್ವಂತ ಜಾಗ ಇರುವ ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿ ರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚದರ ಅಡಿ ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರೂ.1,20,000/- ಹಾಗೂ ಪರಿಶಿಷ್ಟ ಜಾತಿ...
ಮುಲ್ಕಿ ಜಂಕ್ಷನ್ ಬಳಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ನುಗ್ಗಿದ ಲಾರಿ;ಆಟೋ ರಿಕ್ಷಾ, ಸ್ಕೂಟರ್ ಗೆ ಡಿಕ್ಕಿ
ಮುಲ್ಕಿ : ಮುಲ್ಕಿ ಜಂಕ್ಷನ್ ಬಳಿ ಲಾರಿಯೊ೦ದು ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ನುಗ್ಗಿ ಆಟೋ ರಿಕ್ಷಾ, ಸ್ಕೂಟರ್ ಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ ಸ೦ಭವಿಸಿದ್ದು ಸ್ಕೂಟರ್ ಸವಾರ ಸಂಗಪ್ಪ ಗ೦ಭೀರ ಗಾಯಗೊ೦ಡಿದ್ದಾರೆ.ಸಹಸವಾರೆ, ಅವರ ಮಗಳಾದ ಸವಿತಾ ಸೇರಿದ೦ತೆ ಮೂವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಅಪಘಾತದ ವೇಳೆ ಅ ಪ್ರದೇಶದಲ್ಲಿ ಹೆಚ್ಚಿನ...
ವಸತಿ ಶಾಲೆ ಹಾಗೂ ವಸತಿ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ
ಉಳ್ಳಾಲ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ಉಳ್ಳಾಲ ತಾ. ಅಸೈಗೋಳಿಯಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ವಸತಿ ಕಾಲೇಜಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು ಕಲಿಕಾ ಗುಣಮಟ್ಟ ಪರಿಶೀಲಿಸಿದರು. ಹಾಸ್ಟೆಲ್, ಅಡುಗೆ ಕೋಣೆಯನ್ನು ಅವರು ತಪಾಸಣೆ ಮಾಡಿದರು.
ಸ್ಕೂಟರ್ ಗೆ ಬಸ್ ಡಿಕ್ಕಿ: ಸವಾರ ಸಾವು
ಬಂಟ್ವಾಳ: ಸ್ಕೂಟರ್ ಗೆ ಬಸ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ಎಂಬಲ್ಲಿ, ಬುಧವಾರ ಸ೦ಜೆ ಸ೦ಭವಿಸಿದೆ.ನಾರಾಯಣ ಮೃತಪಟ್ಟವರು.ಬುಧವಾರ ಸಂಜೆ ಪಲ್ಲಮಜಲು ಕ್ರಾಸ್ ಎಂಬಲ್ಲಿ, ರಾಜ ಲಕ್ಷ್ಮಿ ಖಾಸಗಿ ಬಸ್ ನ ಚಾಲಕ ಮುನೀರ್ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲ ಬದಿಗೆ...
ಮೇವು ಸಂಗ್ರಹಿಸಲು ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಮತ್ತು ಮೂಡಬಿದ್ರೆ ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಜಲಮೂಲಗಳ ಸಂಗ್ರಹಣೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವವಾಗುವ ಹಾಗೂ ಒಣಮೇವಿನ ದರವು ಅಧಿಕಗೊಳ್ಳುವ ಸಾಧ್ಯತೆ ಇರುತ್ತದೆ.ಜಿಲ್ಲೆಯಲ್ಲಿ ಭತ್ತದ ಫಸಲು ಕಟಾವಣೆ ಆರಂಭವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಮುಂದಿನ...
ರಸ್ತೆ ಗುಂಡಿ: ದೂರುಗಳಿದ್ದರೆ 24 ಗಂಟೆಯೂ ಕಾಲ್ ಮಾಡಿ ತಿಳಿಸಬಹುದು
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಡಾಮಾರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ಸುಗಮ ಸಂಚಾರಕ್ಕೆ ಸಮಸೆÀ್ಯಯಾಗುತ್ತಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರವುದರಿಂದ ಗಂಭೀರವಾಗಿ ಪರಿಗಣಿಸಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಹಾಗೂ ಅಡ್ಡ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪ್ಯಾಕೇಜ್‍ವಾರು ತೇಪೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ.ಈ ನೀಟಿನಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ...
ಅನಧಿಕೃತ ಕ್ಲಿನಿಕ್,ಲ್ಯಾಬ್‍ಗಳ ಮೇಲೆ ಆರೋಗ್ಯ ಇಲಾಖೆ ದಾಳಿ, ಬೀಗಮುದ್ರೆ
ಮಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಜಡಿದಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆ.ಪಿ.ಎಂ.ಇ.ಎ ಕಾಯ್ದೆ-2017 ರ ಅಡಿಯಲ್ಲಿ ಖಾಸಗಿ ಸಂಸ್ಥೆ/ ಕ್ಲಿನಿಕ್‍ಗಳು/ ಲ್ಯಾಬೋರೇಟರಿಗಳು ನೋಂದಾವಣೆಯಾಗದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ/ ಕ್ಲಿನಿಕ್ ಲ್ಯಾಬೋರೇಟರಿಗಳನ್ನು...
ದ.ಕ ಜಿಲ್ಲೆಯಲ್ಲಿ 25045 ಯುವ ಮತದಾರರ ಸೇರ್ಪಡೆ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು 18 ವರ್ಷ ತುಂಬಿದ 25045 ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ 18 ವರ್ಷ ತುಂಬಿದ 45530 ಯುವಜನರು ಇದ್ದಾರೆ. ಈ ಪೈಕಿ 25045 ಜನ ಮಾತ್ರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದಾರೆ, ಇನ್ನು 20494 ಮಂದಿ ಬಾಕಿ ಇದ್ದು ಇವರನ್ನು ಮತದಾರರ ಪಟ್ಟಿಗೆ...



