24.3 C
Karnataka
Thursday, April 30, 2026

ಸುದ್ದಿ

ಫೋಕಸ್ ವತಿಯಿಂದ ಬಡ ಕುಟುಂಬಕ್ಕೆ ನೆರವು

0
ಮೂಡುಬಿದಿರೆ: ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ನ. 30 ರಂದು ಮೂಡುಬಿದಿರೆಯ ಪಾಲಡ್ಕದಲ್ಲಿರುವ ಅಲೆಕ್ಸ್ ಪಿಂಟೊ ಅವರ ಬಡ ಕುಟುಂಬಕ್ಕೆ ಭೇಟಿ ನೀಡಿ 25000 ರೂ. ಮೊತ್ತದ ಚೆಕ್ಕನ್ನು ನೀಡಲಾಯಿತು.ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ,...

ಉಚಿತ ಅರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ

0
ಮಂಗಳೂರು: ತಲಪಾಡಿಯ ಶ್ರಿಕೃಷ್ಣ ಭಜನಾ ಮಂದಿರ ಇದರ 64ನೇ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕರಿಗೆಉಚಿತ ಅರೋಗ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ದಿನಾಂಕ 3.12.2023ರಂದು ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಕೃಷ್ಣ ನಗರ, ಕೆ.ಸಿ ರೋಡು ಇಲ್ಲಿ ಏರ್ಪಡಿಸಲಾಗಿದೆ.ನಗರದ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಲಕ್ಷ್ಮಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಮಂಗಳೂರು ಹಾಗೂಆರೋಗ್ಯ ಮತ್ತು ಕುಟುಂಬ...

ಸಿಎಚ್‌ಡಿ ಗ್ರೂಪ್‌ನಿಂದ ಯುಎಇಯ ಸಿಒಪಿ28 ಸಭೆಯಲ್ಲ್ಲಿಜಾಗತಿಕ ನಿಯೋಗದ ಮುನ್ನಡೆಸುವಿಕೆ

0
ಮಂಗಳೂರು :ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯುಎನ್‌ಎಫ್‌ಸಿಸಿಯ ಸಿಒಪಿ28 ಸಭೆಯಲ್ಲಿ ಮಂಗಳೂರು ಪ್ರಧಾನ ಕಚೇರಿಯ ಜಾಗತಿಕ ಆರೋಗ್ಯ ಸಂಸ್ಥೆಯಾದ ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ನಿಯೋಗವನ್ನುಮುನ್ನಡೆಸಲಿದೆ. ಸಿಒಪಿ28 ಸಭೆಯು 2023, ನವೆಂಬರ್ 30ರಿಂದ ಡಿಸೆಂಬರ್ 12ರವರೆಗೆ ಜರುಗಲಿದೆ.ಸಿಎಚ್‌ಡಿ ಗ್ರೂಪ್ ಸಂಸ್ಥೆಯು ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಇರಾನ್‌ನಿಂದ 7 ಸದಸ್ಯರನ್ನೊಳಗೊಂಡ ತಜ್ಞರ ನಿಯೋಗವನ್ನು ಮುನ್ನಡೆಸುತ್ತದೆ.ಹಾಗೂ, ಹವಾಮಾನ...

ಕುತ್ಲೂರು ಹಿರಿಯ ಪ್ರಾಥಮಿಕ ಶಾಲೆ: ಡಿ.2ರ೦ದು ಅಡಿಕೆ ತೋಟ ಸಮೃದ್ಧಿ ಸಿರಿ ಲೋಕಾರ್ಪಣೆ

0
ಮಂಗಳೂರು:ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 1954ರಲ್ಲಿ ಆರಂಭಗೊಂಡ ಕುತ್ಲೂರು ಶಾಲೆ.2004ರಲ್ಲಿ ಶಾಲಾ ಸುವರ್ಣ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ನಂತರದ ದಿನಗಳಲ್ಲಿ ಶಾಲೆಯು ಅನೇಕ ಏಳು ಬೀಳುಗಳನ್ನು ಕಂಡಿದ್ದು, 2018ರಲ್ಲಿ ಶಾಲೆಯ ಮಕ್ಕಳ ಸಂಖ್ಯೆ 43ಕ್ಕೆ ಮುಟ್ಟಿತು. ಈ ಪರಿಸ್ಥಿತಿ ಯನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯ ಕಾರ್ಯಕ್ರಮ...

ಕನಕದಾಸರ ಚಿಂತನೆಗಳು ಇಂದಿಗೂ ಪ್ರಸುತ್ತ : ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ . ಎಂ. ಪಿ

0
ಮ೦ಗಳೂರು: ನಮಗೆ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ಕನಕದಾಸರ ಮಾರ್ಗದರ್ಶನ ಅಗತ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ . ಎಂ. ಪಿ ಹೇಳಿದರು.ಅವರು ಗುರುವಾರ ನಗರದ ತುಳುಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ನಾವು ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆದಿದ್ದೇವೆ. ಇದಕ್ಕೆ ಬುನಾದಿಯನ್ನುದಾಸರು ಹಾಕಿದ್ದಾರೆ. ಕನಕದಾಸರು ಭಕ್ತನಾಗಿ, ಪರಿಶುದ್ಧವಾದ ಯಾವುದೇ ಸ್ವಾರ್ಥವಿಲ್ಲದೆ...

ಅಬಕಾರಿ ಸಚಿವರ ಪ್ರವಾಸ

0
ಮಂಗಳೂರು: ಅಬಕಾರಿ ಸಚಿವರ ಆರ್.ಬಿ. ತಿಮ್ಮಾಪುರ ಅವರು ನವೆಂಬರ್ 30ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ನವೆಂಬರ್ 30ರಂದು ಬೆಳಿಗ್ಗೆ 9 ಗಂಟೆಗೆ - ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಜಿಲ್ಲಾ ಮಟ್ಟದ ಕ್ರೀಡಾಕೂಟ, ಮಧ್ಯಾಹ್ನ 2.30ಕ್ಕೆ -...

ಕ್ಲಿನಿಕ್, ಆಸ್ಪತ್ರೆಗಳ ನೋಂದಣಿ ಕಡ್ಡಾಯ :ಅರ್ಹತೆ ಇಲ್ಲದವರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತಿಲ್ಲ

0
ಮಂಗಳೂರು:ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿಗೊಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.ಅವರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.ಡೆಂಟಲ್, ಆಯುಷ್, ಹೋಮಿಯೋಪಥಿ, ಫಿಸಿಯೋಥೆರಿಪಿ, ನ್ಯಾಚುರೋಪತಿ ಸೇರಿದಂತೆ ವ್ಯೆದ್ಯಕೀಯ...

ಮಾಧ್ಯಮ ಮಾಹಿತಿಗಷ್ಟೇ ಸೀಮಿತವಲ್ಲ; ಜ್ಞಾನ ವಾಹಕವೂ ಹೌದು: ಡಾ. ಸಿಂಧೂ ಮಂಜೇಶ್

0
ಮಂಗಳೂರು: ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಯು ಜನರ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಸುದ್ದಿ ಮಾಧ್ಯಮಗಳು ಕೇವಲ ಸುದ್ದಿಗಳನ್ನು ಉತ್ಪಾದಿಸುವುದಿಲ್ಲ; ಬದಲಾಗಿ ಮಾಹಿತಿಗಳನ್ನು ಪಸರಿಸುವ ಮೂಲಕ ಜ್ಞಾನದ ಹರಿವನ್ನು ಹೆಚ್ಚಿಸುತ್ತಿದೆ ಎಂದು ಡಾ. ಸಿಂಧೂ ಮಂಜೇಶ್ ಹೇಳಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪಿ.ಪಿ. ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮವಿಭಾಗ ಇದರ...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ರಫಿ ಅವರಿಗೆ ಸಮ್ಮಾನ

0
ಮ೦ಗಳೂರು: ಕಾರ್ಮಿಕ ನಾಯಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ರಫಿ ಅವರನ್ನು ಮಂಗಳೂರಿನ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ರವಿವಾರ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಹಾಗೂ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್‍ಸ್ ಯೂನಿಯನ್ ಆಶ್ರಯದಲ್ಲಿ ಸಮ್ಮಾನಿಸಿ ಅಭಿನ೦ದಿಸಲಾಯಿತು. ಮಹಮ್ಮದ್ ರಫಿ ಅವರನ್ನು ಸಮ್ಮಾನಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೀಡಿ ಕಾರ್ಮಿಕರು ಹಾಗೂ...

ಡಿಸೆಂಬರ್ 10ರ ವರೆಗೆ ಬಾಲಕಾರ್ಮಿಕರ ಪತ್ತೆಗೆ ಅನಿರೀಕ್ಷಿತ ದಾಳಿ

0
ಮಂಗಳೂರು: ಪ್ಯಾನ್ ಇಂಡಿಯಾ ರಕ್ಷಣಾ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿಗೊಳಿಸುವ ನಿಟ್ಟಿನಲ್ಲಿ ನವೆಂಬರ್ 20ರಿಂದ ಡಿಸೆಂಬರ್ 10ರವರೆಗೆ ಹೊಟೇಲ್, ಗ್ಯಾರೇಜ್, ಅಪಾರ್ಟ್‍ಮೆಂಟ್ಸ್, ಧಕ್ಕೆ...