ಹೆದ್ದಾರಿ ಭೂಸ್ವಾಧೀನ- ಮಾರ್ಚ್ 20 ರಂದು ಪರಿಹಾರ ಪಾವತಿ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಾಣೂರು ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್‍ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮ ಮಾರ್ಚ್ 20 ರಂದು ಬೆಳಿಗ್ಗೆ 10.30 ಗಂಟೆಗೆ ಗಂಜಿಮಠ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ತೆಂಕ ಎಡಪದವು, ಬಡಗ ಎಡಪದವು, ಬಡಗ ಉಳಿಪಾಡಿ, ತೆಂಕ ಉಳಿಪಾಡಿ,...
ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ
ಮ೦ಗಳೂರು: ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ ಸಂಭ್ರಮ್ 2025, ಮಾ. 16 ರಂದು ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್‌ನ ಶಹನಾಯಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.
2005ರಲ್ಲಿ ಮಂಗಳೂರಿನ ಪಂಪ್ ವೆಲ್‌ನಲ್ಲಿ ಸ್ಥಾಪನೆಯಾದ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಂಸ್ಥೆಯನ್ನು, ಆಂದಿನ ಸೇವಾದಳದ ಕಾರ್ಯದರ್ಶಿಯಾಗಿದ್ದ ಮತ್ತು ಈಗಿನ ಕರ್ನಾಟಕ ಸರ್ಕಾರದ ಸ್ಪೀಕರ್ ಆದ ಯು.ಟಿ....
ಗೂಗಲ್ ಬದಲು ಗ್ರಂಥಾಲಯ ಅವಲಂಬಿಸಿ- ಡಾ.ಸಂಕಮಾರ್
ಮಂಗಳೂರು : ಅಕ್ಷರ ಲೋಕಕ್ಕೆ ಪ್ರಬಲವಾದ ಶಕ್ತಿ ಇದೆ. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದುವ ಅಭಿರುಚಿ ಬೆಳೆಸುವುದು ಅವಶ್ಯವಾಗಿದೆ. ಗೂಗಲ್ ಬದಲು ಗ್ರಂಥಾಲಯ ಅವಲಂಬಿಸಲು ಪ್ರೇರಣೆ ನೀಡಬೇಕು ಎಂದು ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಭಾನುವಾರ ಸ್ವಗೃಹದಲ್ಲಿ...
ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಸಂಜೆ ಬಂಟರ ಭವನ ವಠಾರದಲ್ಲಿ ಜರುಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು,ಮಾತನಾಡಿ “ಪಟ್ಲ ಫೌಂಡೇಶನ್ ಸುರತ್ಕಲ್ ಘಟಕ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತ ಬಂದಿದೆ....
ಬೆಂಗ್ರೆ : ಆಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶಿವಾಜಿ ಪಾರ್ಕ್ ಬಳಿ ಆಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಂಡು ಎಲ್ಲರ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಹಾರೈಸಿದರು.
ಗಂಗಾಧರ ಸಾಲ್ಯಾನ್,...
ಡಾ.ಆರ್.ಕೆ.ನಾಯರ್ ಪ್ರೆಸ್ ಕ್ಲಬ್ ಗೌರವ ಅತಿಥಿ
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಾ.18ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗುಜರಾತ್ ನ ಸ್ಮೃತಿ ವನದ ರೂವಾರಿ, ಪರಿಸರವಾದಿ ಡಾ.ಆರ್.ಕೆ.ನಾಯರ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.
ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್...
ಒಳಚರಂಡಿಗೆ ಕಟ್ಟಡದ ಮಳೆ ನೀರು ಸಂಪರ್ಕ: ತೆರವುಗೊಳಿಸಲು ನಗರಪಾಲಿಕೆ ಸೂಚನೆ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಮನೆಗಳು, ಅಪಾರ್ಟ್‍ಮೆಂಟ್‍ಗಳು, ವ್ಯಾಪಾರಸ್ಥರು, ಕೈಗಾರಿಕೆಗಳು ಒಳ ಚರಂಡಿ ಜಾಲಕ್ಕೆ/ಮಷಿನ್ ಹೋಲ್‍ಗಳಿಗೆ ಮಳೆ ನೀರನ್ನು ಹರಿಯ ಬಿಡುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಒಳಚರಂಡಿ ಜಾಲದಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಾಗಿ ಮಳೆ ನೀರು ಮಿಶ್ರಿತ ಒಳಚರಂಡಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮಷಿನ್ ಹೋಲ್‍ಗಳಿಂದ ಒಳ ಚರಂಡಿ ನೀರು ಹೊರ ಸೂಸಿ...
ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ
ಮ೦ಗಳೂರು: “ಗ್ರಾಹಕರು ಖರೀದಿಸುವಾಗ ಯಾವುದೇ ವಂಚನೆಗೆ ಒಳಗಾಗಬಾರದು ಹಾಗೂ ತಮ್ಮ ಹಕ್ಕುಗಳ ಬಗೆಗೆ ಸರಿಯಾಗಿ ತಿಳಿದಿರಬೇಕು ಎ೦ದು” ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷಕೆ .ಪೃಥ್ವಿರಾಜ್ ರೈ ,ಹೇಳಿದರು .ಪಿ.ಎ ಪ್ರಥಮ ದರ್ಜೆ ಕಾಲೇಜುಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಹಯೋಗದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಕಾಯ೯ಕ್ರಮದಲ್ಲಿ...
ಹಿರಿಯ ಸಾಹಿತಿ ಡಾ.ಕೆ.ಚಿನ್ನಪ್ಪ ಗೌಡ ಅವರಿಗೆ ಗೌರವಾಪ೯ಣೆ
ಮಂಗಳೂರು : ದೇಶದ ಬಹು ಭಾಷೆಗಳಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದ್ದು, ಭಾರತೀಯ ಸಾಹಿತ್ಯದ ವ್ಯಾಪ್ತಿ, ವೈವಿಧ್ಯತೆ ಅಗಾಧವಾಗಿದೆ. ಸ್ವತಂತ್ರ ಕೃತಿ ರಚನೆಯ ಜತೆಗೆ ,ಇತರ ಭಾಷೆಯ ಪ್ರಮುಖ ಕೃತಿಗಳನ್ನು ಅನುವಾದ ಮಾಡುವ ಮೂಲಕ ನಮ್ಮ ಸಾಹಿತ್ಯಿಕ ಪರಂಪರೆಯನ್ನು ಎಲ್ಲೆಡೆ ಪಸರಿಸಲು ಸಾಹಿತಿಗಳು ಪ್ರಯತ್ನಿಸಬೇಕು ಎಂದು ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.ಅಖಿಲ...
ಚೇತನಾ ಶಾಲೆಯಲ್ಲಿ ಯೂತ್ ಆಫ್ ಜಿಎಸ್ ಬಿ ಹೋಳಿ ಸಂಭ್ರಮ!
ಮ೦ಗಳೂರು: ಬಣ್ಣಗಳನ್ನು ಮುಖಕ್ಕೆ ಹಚ್ಚಿಕೊಂಡು, ನೀರು ತುಂಬಿದ ಬೆಲೂನುಗಳನ್ನು ಸಿಡಿಸಿ, ಹಾಡಿಗೆ ಹೆಜ್ಜೆ ಹಾಕುತ್ತಾ ಚೇತನಾ ಶಾಲೆಯ ವಿಶೇಷ ಚೇತನ ಮಕ್ಕಳು ಈ ಬಾರಿಯ ಹೋಳಿ ಸಂಭ್ರಮವನ್ನು ಆಚರಿಸಿದರು.
ಪ್ರಾರಂಭದಲ್ಲಿ ಪ್ರತಿ ಮಗು ಕೂಡ ತನ್ನ ಕೈಗಳನ್ನು ಬಣ್ಣದ ನೀರಿನಲ್ಲಿ ಅದ್ದಿ ಬಿಳಿ ಹಾಳೆಯ ಮೇಲೆ ಅಚ್ಚನ್ನು ಒತ್ತುತ್ತಾ ಮುಖದಲ್ಲಿ ಅರಳುತ್ತಿದ್ದ ನಗೆಯನ್ನು ಸಂಭ್ರಮಿಸುತ್ತಾ ಕಾರ್ಯಕ್ರಮ...